Advertisement

ವಿಶ್ವದೆಲ್ಲೆಡೆ ಕೋ”ವಿನ್”

08:30 PM Jun 28, 2021 | Team Udayavani |

ನವ ದೆಹಲಿ : ಲಸಿಕೆ ನೋಂದಣಿ ಮಾಡುವ ಕೋವಿನ್ ಆ್ಯಪ್ ಈಗ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಕೋವಿನ್ ಆ್ಯಾಪ್ ನ ತಂತ್ರಜ್ಞಾನವನ್ನು ತಮ್ಮ ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನದಲ್ಲಿ ಅಳವಡಿಸಿಕೊಳ್ಳಲ್ಲು ವಿಶ್ವದ ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳು ಆಸಕ್ತಿ ತೋರಿಸಿವೆ.

Advertisement

ಈ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ ಎಚ್‌ ಎ) ಸಿಇಒ ಮತ್ತು ಕೋವಿನ್ ಪೋರ್ಟಲ್ ನ ಮುಖ್ಯಸ್ಥ ಆರ್. ಎಸ್. ಶರ್ಮಾ, ಮಧ್ಯ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ 50 ಕ್ಕೂ ಹೆಚ್ಚು ದೇಶಗಳು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿವೆ ಎಂದು ಹೇಳಿದ್ದಾರೆ.


 ಇದನ್ನೂ ಓದಿ : ಎಂಟು ಬಾರಿ ಶಾಸಕನಾಗಿರುವ ನನಗೂ ಸಿ.ಎಂ. ಆಗುವ ಅರ್ಹತೆ ಇದೆ : ಸಚಿವ ಉಮೇಶ್ ಕತ್ತಿ

ಮಾತ್ರವಲ್ಲದೇ,  “ಯಾವುದೇ ಆಸಕ್ತ ದೇಶಕ್ಕೆ ಕೋವಿನ್ ನನ್ನು ಮುಕ್ತವಾಗಿ ಮೂಲ ಆವೃತ್ತಿಯನ್ನು ಉಚಿತವಾಗಿ ರಚಿಸಲು ಪ್ರಧಾನ ಮಂತ್ರಿ  ನಮಗೆ ನಿರ್ದೇಶನ ನೀಡಿದ್ದಾರೆ” ಎಂದು ಶರ್ಮಾ ತಿಳಿಸಿದ್ದಾರೆ.

ಇನ್ನು, ಭಾರತವು ಕೋವಿನ್ ಪ್ಲಾಟ್‌ ಫಾರ್ಮ್ ನನ್ನು ವಿಶ್ವದಾದ್ಯಂತದ ದೇಶಗಳಿಗೆ ನೀಡುತ್ತಿದೆ ಎಂದು ಘೋಷಿಸಿದ್ದು, ಜುಲೈ 5 ರಂದು ಮಧ್ಯಾಹ್ನ 3 ಗಂಟೆಗೆ ‘ಕೋವಿನ್ ಗ್ಲೋಬಲ್ ಕಾನ್ಕ್ಲೇವ್’ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Advertisement

ಭಾರತದಲ್ಲಿ ಕೊವಿನ್​ ಆ್ಯಪ್​​ನಿಂದ ತುಂಬ ಅನುಕೂಲವಾಗುತ್ತಿದೆ. ಈ ಹಿಂದೆ ಆಧಾರ್​, ಯುಪಿಐ ಅಭಿವೃದ್ಧಿ ಪಡಿಸಿದ ಅನುಭವದಲ್ಲೇ ಈ ಪೋರ್ಟಲ್​ ಕೂಡ ಹೊರತರಲಾಗಿತ್ತು. ಕೇವಲ 5 ತಿಂಗಳಲ್ಲಿ ಈ ಪೋರ್ಟಲ್​​ನಲ್ಲಿ 30 ಕೋಟಿ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿವರವೂ ಈ ಪೋರ್ಟಲ್​ನಲ್ಲಿ ಲಭ್ಯವಿದೆ ಎಂದು ಆರ್​.ಎಸ್.ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ : ಚಾರ್‌ಧಾಮ್‌ ಯಾತ್ರೆಗೆ ಹೈಕೋರ್ಟ್ ತಡೆ : ದೇಗುಲದಲ್ಲಿ ನಡೆಯುವ ಪೂಜೆಯ ನೇರ ಪ್ರಸಾರಕ್ಕೆ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next