Advertisement

ಗೋವನ್ನು ಮಾತೆಯಂತೆ ಗೌರವಿಸಲು ಪೇಜಾವರ ಶ್ರೀ ಸಲಹೆ

01:03 PM Oct 27, 2021 | Team Udayavani |

ಮುದ್ದೇಬಿಹಾಳ: ಇಲ್ಲಿನ ಜನರ ಭಕ್ತಿಯನ್ನು ಕಂಡು ನಾವು ತುಂಬ ಸಂತಸಪಟ್ಟಿದ್ದೇವೆ. ನೀವೆಲ್ಲರೂ ಮಾಡಿರತಕ್ಕಂತಹ ಈ ಸತ್ಕಾರ ಉಡುಪಿಯ ಕೃಷ್ಣನ ಸ್ಥಾನದಿಂದ ಜಗದ್ಗುರುಗಳಾದ ಮಧ್ವಾಚಾರ್ಯರ ಪರಂಪರೆಗೆ ಸಲ್ಲಿಸಿದ ಗೌರವ. ನಿಮ್ಮ ಈ ಸತ್ಕಾರವನ್ನು ನಾವು ಯಾವತ್ತೂ ಮರೆಯುವುದು ಸಾಧ್ಯವಿಲ್ಲ. ನೀವು ಯಾವಾಗ ಕರೆದರೂ ಬರುತ್ತೇವೆ. ಪ್ರಾಯಶಃ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಐದು ದಿವಸಗಳ ಕಾಲ ನಾವು ಇಲ್ಲಿರುತ್ತೇವೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ನುಡಿದರು.

Advertisement

ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪುರ ಪ್ರವೇಶದ ಸಕಲ ಕಾರ್ಯಗಳ ನಂತರ ಬಾಗಲಕೋಟೆ ಪುರ ಪ್ರವೇಶಕ್ಕೆ ಬೀಳ್ಕೊಡುವುದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ವೈಭವದ ತುಲಾಭಾರ ನಡೆಸಿಕೊಟ್ಟಿದ್ದೀರಿ. ನಿಮ್ಮ ಈ ಪ್ರೀತೀಯ ಭಾರದ ಮುಂದೆ ನಮ್ಮ ಹೃದಯ ತುಂಬಿ ಭಾರವಾಗಿದೆ. ಉಡುಪಿಯ ಗೋಶಾಲೆ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಶಾಸಕ ನಡಹಳ್ಳಿಯವರು 5 ಲಕ್ಷ ರೂ. ದೇಣಿಗೆ ನೀಡಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದರು.

ನಿತ್ಯ ನಾವು ಉಣಬೇಕಾದರೆ ಮೊದಲು ಗೂವುಗಳಿಗೆ ಗ್ರಾಸ ಕೊಟ್ಟು ಉಣ್ಣಬೇಕು. ನಮಗೆ ಉಣ್ಣುವ ಹಕ್ಕು ಸಿಗಬೇಕೆಂದರೆ ಮೊದಲು ಗೋವುಗಳಿಗೆ ಆಹಾರ ಕೊಡಬೇಕು. ಗೋವನ್ನು ಮಾತೆಯಂತೆ ಗೌರವಿಸಬೇಕು. ಗೋ ವೃಷಭಗಳು° ತಂದೆಯಂತೆ ಗೌರವಿಸಬೇಕು. ನಮ್ಮ ತಾಯಿ ಎದೆ ಹಾಲನ್ನು ಹುಟ್ಟಿದ ನಂತರ, ಆಕಳ ಹಾಲನ್ನು ಸಾಯುವವರೆಗೂ ಉಪಯೋಗಿಸುತ್ತೇವೆ. ಇದೊಂದರಿಂದಲೇ ಗೋ ಮಾತೆಯ ಮಹತ್ವ ಅರ್ಥವಾಗುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಹಸು ನಮಗೆ ತಾಯಿಯ ಸಮಾನ. ನಾವು ಉಣ್ಣುವ ಅನ್ನ, ತರಕಾರಿ, ಧಾನ್ಯ ಇವೆಲ್ಲವೂ ಹೊಲದಲ್ಲಿ ಹುಟ್ಟುತ್ತವೆ. ಅಂಥ ಹೊಲವನ್ನು ಹದಗೊಳಿಸುವ ಕಾರ್ಯ ಗೋ ವೃಷಭಗಳದ್ದಾಗಿದೆ. ಅದಕ್ಕಾಗಿ ಗೋ ವೃಷಭಗಳು ನಮಗೆ ತಂದೆ ಸಮಾನ. ಹೀಗೆ ನಮಗೆ ಬದುಕನ್ನೇ ಕೊಟ್ಟ ಗೋವುಗಳು ತಾಯಿ ಸಮಾನವಾದರೆ, ಗೋ ವೃಷಭಗಳು ತಂದೆ ಸಮಾನ ಎಂದು ವ್ಯಾಖ್ಯಾನಿಸಿದರು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ಜೀವನದಲ್ಲಿ ನಮ್ಮ ಆತ್ಮಕ್ಕೆ ಸಂತೋಷ, ಆನಂದ ಸಿಗುವುದು ಇಂಥ ಮಹಾತ್ಮರ ದರ್ಶನ ಪಡೆದಾಗ ಮಾತ್ರ ಸಾಧ್ಯ. ನಾನು ಸಿದ್ದಗಂಗಾಮಠದಲ್ಲಿ ಬೆಳೆದು ಬಂದಿರುವ ನನಗೆ ಸಂಸ್ಕೃತಿ ಮತ್ತು ಮಠಗಳ ಇತಿಹಾಸದ ಪರಿಚಯ ಇದೆ. ನಮ್ಮ ದೇಶದ ಸಂಸ್ಕೃತಿ, ಹಿಂದೂ ಧರ್ಮದ ಮಹತ್ವವನ್ನು ಇಂದಿನ ಯುವ ಜನತೆಗೆ ತಿಳಿಸಿಕೊಡಬೇಕಾಗಿದೆ. ಈ ದೇಶ ಕಂಡ ಎಲ್ಲ ಮಹಾತ್ಮರು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಬೆಳೆದವರು ಎಂದರು. ಫೆಬ್ರವರಿ ತಿಂಗಳಲ್ಲಿ 5 ದಿನಗಳ ಕಾಲ ಶ್ರೀಗಳು ಇಲ್ಲಿಗೆ ಬರಲು ಒಪ್ಪಿರುವುದು ನಮ್ಮ ಸುದೈವವಾಗಿದ್ದು ಹಿಂದೂತ್ವದ ಸಾರ ಯುವ ಜನತೆಗೆ ತಿಳಿಸಿಕೊಡುವ ಕಾರ್ಯ ಮಾಡುತ್ತೇವೆ. ಶ್ರೀಗಳು 15 ದಿನ ಕಾಲಾವಕಾಶ ಕೊಟ್ಟರೂ ಅಪರೂಪದ ಆಧ್ಯಾತ್ಮದ ಕಾರ್ಯ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.

ವಿಪ್ರ ಸಮಾಜದ ಹಿರಿಯರಾದ ವಿ.ಕೆ.ದೇಶಪಾಂಡೆ, ಬಿ.ಪಿ.ಕುಲಕರ್ಣಿ, ಎಸ್‌.ಆರ್‌.ಕುಲಕರ್ಣಿ, ಜಿ.ಆರ್‌ .ದೊಡ್ಡಿಹಾಳ, ಸುರೇಶ ಕುಲಕರ್ಣಿ, ಪ್ರಕಾಶ ಸರಾಫ, ರಾಘವೇಂದ್ರ ಕುಲಕರ್ಣಿ, ವಾಸು ಸಾಲೋಡಗಿ, ರಾಜು ಪದಕಿ, ಪ್ರಕಾಶ ದೇಶಪಾಂಡೆ, ಬಾಳು ಗಿಂಡಿ, ಗುರುರಾಜ ರಾಜಪುರೋಹಿತ, ಪುಟ್ಟು ಕುಲಕರ್ಣಿ, ನಾರಾಯಣ ಕುಲಕರ್ಣಿ, ಸತೀಶ ಕುಲಕರ್ಣಿ, ಅನಿಲ ಕುಲಕರ್ಣಿ, ಸುಭಾಷ್‌ ಕುಲಕರ್ಣಿ, ತುಲಾಭಾರ ನಡೆಸಿಕೊಟ್ಟ ವಾಸುದೇವ ಶಾಸ್ತ್ರಿ ದಂಪತಿ, ಇತರೆ ಸಮಾಜಗಳ ಗಣ್ಯರಾದ ಬಿ.ಸಿ.ಮೋಟಗಿ, ಪ್ರಭು ಕಡಿ, ಡಾ| ಪರಶುರಾಮ ಪವಾರ, ಭೀಮಶೆಪ್ಪ ಮದರಿ, ಪುರಸಭೆ ಸದಸ್ಯ ಬಸವರಾಜ ಮುರಾಳ, ಭಕ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next