Advertisement

ಇಟಲಿಯಲ್ಲಿ ಮೊದಲಿಗೆ ವೈರಸ್‌ ಕಾಣಿಸಿಕೊಂಡಿದ್ದು ಕಲುಷಿತ ನೀರಿನಲ್ಲಿ

02:40 PM Jun 20, 2020 | sudhir |

ರೋಮ್‌: ಕೋವಿಡ್‌-19 ಸೋಂಕು ಇಡೀ ವಿಶ್ವಕ್ಕೆ ಪಸರಿಸಿ ತಿಂಗಳುಗಟ್ಟಲೆ ಕಳೆದಿದೆ. ಇಷ್ಟಾದರೂ ಆ ಡೆಡ್ಲಿ ವೈರಸ್‌ ಆರ್ಭಟ ಮುಂದುವರೆದಿದ್ದು, ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. ಆದರೂ ಇಂದಿಗೂ ಈ ಸೋಂಕಿನ ಮೂಲದ ಕುರಿತು ಹುಡುಕಾಟ ನಡೆಯುತ್ತಲೇ ಇದ್ದು, ಕೋವಿಡ್‌-19 ಕುರಿತಾಗಿ ಪ್ರತಿದಿನ ಒಂದಲ್ಲ ಒಂದು ವಿಭಿನ್ನ ಮಾಹಿತಿ ಹೊರ ಬೀಳುತ್ತಲೇ ಇದೆ.

Advertisement

ಇದೀಗ ಇಟಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್ ನಡೆಸಿದ ಅಧ್ಯಯನದ ವರದಿಯೊಂದು ಬಿಡುಗಡೆಯಾಗಿದ್ದು, 2019ರ ಡಿಸೆಂಬರ್‌ನಲ್ಲಿ ರೋಮ್‌ನ ಉತ್ತರ ನಗರಗಳಾದ ಮಿಲನ್‌ ಮತ್ತು ಟುರಿನ್‌ಗಳ ಕಲುಷಿತ ನೀರಿನಲ್ಲಿ ಹೊಸ ಬಗೆಯ ಕೋವಿಡ್ ವೈರಸ್‌ ಕಂಡುಬಂದಿತ್ತು ಎಂದು ಅಧ್ಯಯನದ ವರದಿ ತಿಳಿಸಿದೆ.

ಉತ್ತರ ಇಟಲಿಯ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಅಕ್ಟೋಬರ್‌2019 ರಿಂದ ಫೆಬ್ರವರಿ 2020ರವರೆಗೆ ಸಂಗ್ರಹಿಸಲಾದ 40 ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ಅಂಶವನ್ನು ಬೆಳಕಿಗೆ ಬಂದಿದ್ದು, ಮೊದಲು ತ್ಯಾಜ್ಯ ತುಂಬಿದ ನೀರಿನಲ್ಲಿ ಕಂಡುಬಂದಿದ್ದ ವೈರಸ್‌ ಅನಂತರ ಸ್ಥಳೀಯ ಜನರಿಗೆ ಹರಡಿದೆ ಎಂದು ಅಧಿಕಾರಿಗಳು ದೃಢೀಕರಿಸಿದ್ದಾರೆ.

ಡಿಸೆಂಬರ್‌18 ರಲ್ಲಿ ಮಿಲನ್‌ ಮತ್ತು ಟುರಿನ್‌ ನಗರಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಕೋವಿಡ್‌-19 ಗೆ ಕಾರಣವಾಗುವ ವೈರಸ್‌ ಕಂಡುಬಂದಿದೆ. ಆದರೆ ಡಿಸೆಂಬರ್‌ಗೂ ಹಿಂದೆ ಸಂಗ್ರಹಿಸಿದ ಮಾದರಿಗಳಲ್ಲಿ ಕೋವಿಡ್‌ ರೀತಿಯ ಯಾವುದೇ ವೈರಸ್‌ ಕಂಡುಬಂದಿಲ್ಲ. ಇನ್ನು ಮುಂಜಾಗ್ರತ ಕ್ರಮವಾಗಿ ಮುಂದಿನ ತಿಂಗಳಿನಿಂದ ಇಟಲಿಯ ಪ್ರವಾಸಿ ತಾಣಗಳಲ್ಲಿ ಈ ಬಗೆಯ ಸಂಶೋಧನೆ ನಡೆಸುವುದಾಗಿ ಇಟಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next