Advertisement

ಕೋವಿಡ್‌ ನಿಯಮ ತಪ್ಪದೇ ಪಾಲಿಸಿ: ಚಾಪಲ್‌

08:27 PM Jan 08, 2022 | Team Udayavani |

ದೇವದುರ್ಗ: ಕೊನೊರಾ ಮೂರನೇ ಅಲೆ ಸೋಂಕು ದಿನೇ-ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರಕಾರ ಹೊರಡಿಸಿದ ವೀಕೆಂಡ್‌ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಅಧಿ ಕಾರಿಗಳ ಮೇಲೆ ಹೆಚ್ಚಿದೆ ಎಂದು ತಹಶೀಲ್ದಾರ್‌ ಶ್ರೀನಿವಾಸ ಚಾಪಲ್‌ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ವೀಕೆಂಡ್‌ ಕರ್ಫ್ಯೂ ಕುರಿತು ತಾಲೂಕು ಮಟ್ಟದ ಅ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಶನಿವಾರ ನಡೆಯುವ ವಾರದ ಸಂತೆ ತರಕಾರಿ, ಕುರಿ, ಮೇಕೆ, ಜಾನುವಾರುಗಳ ಸಂತೆ ರದ್ದು ಮಾಡಲಾಗಿದೆ. ವಾರದ ಸಂತೆಗೆ ಬರುವಂತ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿಗಳೊಂದಿಗೆ ಬಿಗಿ ಕ್ರಮ ಕೈಗೊಳ್ಳಬೇಕು. ಹೂವಿನಹೆಡಗಿ ಚೆಕ್‌ ಪೋಸ್ಟ್‌, ಶಂಕರಬಂಡಿ ಕ್ರಾಸ್‌, ಸಿರವಾರ ಕ್ರಾಸ್‌, ಬೆಟ್ಟದ ಶಂಭುಲಿಂಗೇಶ್ವರ, ವೆಂಗಳಪುರ ಮಾರ್ಗ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಸೇರಿದಂತೆ ಬಿಗಿ ಕ್ರಮಕೈಗೊಳ್ಳಲು ಜಾಗೃತಿ ವಹಿಸಬೇಕು ಎಂದು ತಿಳಿಸಿದರು. ಹಳ್ಳಿಗಳಲ್ಲಿ ಗ್ರಾಪಂ ಮೂಲಕ ವಾರದ ಸಂತೆ ರದ್ದು, ವಾರಾಂತ್ಯದ ಕರ್ಫ್ಯೂ  ಕುರಿತು ಡಂಗೂರ ಜತೆ ಜಾಗೃತಿ ಮೂಡಿಸಬೇಕು ಎಂದು ಜಾಲಹಳ್ಳಿ, ಗಬ್ಬೂರು, ಅರಕೇರಾ ಸೇರಿ ನಾಡಕಚೇರಿ ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಇದರಲ್ಲಿ ಪಿಡಿಒಗಳ ಪಾತ್ರಯೂ ಬಹಳ ಮುಖ್ಯವಾಗಿದೆ. ಒಮಿಕ್ರಾನ್‌ ಮೂರನೇ ಅಲೆಯ ಅಬ್ಬರ ಹೆಚ್ಚಿದೆ. ಇಲ್ಲಿವರೆಗೆ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣ ದೃಢಪಟ್ಟಿಲ್ಲ.

ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಹಿಸಲು ಅಧಿ  ಕಾರಿಗಳು ಎಚ್ಚರ ವಹಿಸಬೇಕು ಎಂದು ಸಭೆಯಲ್ಲಿ ತಹಶೀಲ್ದಾರ್‌ ಸೂಚಿಸಿದರು. ಪುರಸಭೆ ವ್ಯಾಪ್ತಿಯ ವಾರ್ಡ್‌ ಗಳಲ್ಲಿ ಟಂಟಂ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಪುರಸಭೆ ಮುಖ್ಯಾಧಿ ಕಾರಿ ಶರಣಪ್ಪ ಅವರಿಗೆ ಸೂಚಿಸಿದರು. ಅಗತ್ಯ ವಸ್ತುಗಳು ಹೊರತುಪಡಿಸಿ ಇನ್ನುಳಿದ ಯಾವುದೇ ಅಂಗಡಿಗಳು ತೆರೆಯದಂತೆ ಪುರಸಭೆ ಅಧಿ ಕಾರಿಗಳು ಎಚ್ಚರವಹಿಸಬೇಕಿದೆ.

ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣ ಮಾಡುವ ಜತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅ ಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿ  ಕಾರಿ ಆರ್‌.ಇಂದಿರಾ, ಸಿಪಿಐ ಆರ್‌. ಎಂ. ನದಾಫ್‌, ಮುಖ್ಯಾವೈದ್ಯಾ ಧಿಕಾರಿ ಆರ್‌.ಎಂ. ಹುಲಿಮನಿಗೌಡ, ಪಿಎಸ್‌ಐ ಸಣ್ಣ ವೀರೇಶ, ನರಸರೆಡ್ಡಿ, ಶಿರಸ್ತೇದಾರ ಮಂಜುನಾಥ, ವಿಕಾಸ, ಮನೋಹರ ಸೇರಿ ಇತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next