Advertisement
ಕೋವಿಡ್ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಕ್ಕೆ ಒಂದು ಬಾರಿಗೆ ಸೀಮಿತಗೊಳಿಸಿ, ರಾಜ್ಯ ಸರಕಾರದ ಸಂಧ್ಯಾಸುರಕ್ಷಾ ಯೋಜನೆ ಲೆಕ್ಕ ಶೀರ್ಷಿಕೆಯ ಅನುದಾನದಿಂದ 1 ಲ.ರೂ., ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಲೆಕ್ಕ ಶೀರ್ಷಿಕೆಯ ಅನುದಾನದಿಂದ ತಲಾ 50,000 ರೂ. ಪರಿಹಾರ ನೀಡಲಾಗುತ್ತದೆ.
Related Articles
Advertisement
ಸಲ್ಲಿಸಬೇಕಾದ ದಾಖಲೆಗಳುಕೋವಿಡ್ -19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ, ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ, ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ, ಅರ್ಜಿದಾರರ ಆಧಾರ್ ಪ್ರತಿ, ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ, ಅರ್ಜಿದಾರರ ಬ್ಯಾಂಕ್/ಅಂಚೆ ಖಾತೆ ಪಾಸ್ ಬುಕ್, ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ನಮೂನೆ-2), ಕುಟುಂಬ ಸದಸ್ಯರ ನಿರಾಕ್ಷೇಪಣ ಪತ್ರ (ನಮೂನೆ-3) ಅರ್ಜಿ ನಮೂನೆಗಳನ್ನು ವೆಬ್ ಸೈಟ್ ವಿಳಾಸ www.udupi.nic.in ಮೂಲಕ ಹಾಗೂ ಸಂಬಂಧಿಸಿದ ತಾಲೂಕು ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅರ್ಹತೆ
ಪರಿಹಾರ ಪಾವತಿಗೆ ಪರಿಗಣಿಸುವ ಎಲ್ಲ ಮೃತ ವ್ಯಕ್ತಿಗಳು ಕೋವಿಡ್-19 ಕಾರಣಗಳಿಂದಾಗಿ ಮೃತಪಟ್ಟಿರಬೇಕು. ಈ ಕುರಿತು ಅಧಿಕೃತ ಮರಣ ಪ್ರಮಾಣಪತ್ರವಿರಬೇಕು. ರಾಜ್ಯ ಸರಕಾರವು ಘೋಷಿಸಿರುವ 1 ಲ.ರೂ. ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿ.ಪಿ.ಎಲ್. ಕುಟುಂಬದ ದುಡಿಯುವ ಸದಸ್ಯರಾಗಿರಬೇಕು. ಅರ್ಜಿದಾರರೂ ಸಹ ಅದೇ ಬಿ.ಪಿ.ಎಲ್. ಕುಟುಂಬದ ಸದಸ್ಯರಾಗಿರಬೇಕು. ಸೋಂಕಿನಿಂದ ಮೃತಪಟ್ಟಿರುವ ಕುರಿತು ವೈದ್ಯಕೀಯ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ ಕೋವಿಡ್-19 ಮರಣ ದೃಢೀಕರಣ ಸಮಿತಿ ನೀಡುವ ನಿಗದಿತ ಮರಣ ಪ್ರಮಾಣ ಪತ್ರವನ್ನು ಪರಿಗಣಿಸುವುದು. ರಾಜ್ಯ ಸರಕಾರದಿಂದ ನೀಡಲಾಗುವ 1 ಲ.ರೂ. ಮರಣ ಪರಿಹಾರ ಧನ ಪಡೆಯಲು ಅರ್ಹವಾಗುವ ಬಿಪಿಎಲ್ ಕುಟುಂಬದ ಮೃತ ವ್ಯಕ್ತಿಯ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.