Advertisement

ತೆಲಂಗಾಣದಲ್ಲಿ ಮೇ 29ರವರೆಗೆ ಲಾಕ್ ಡೌನ್ ವಿಸ್ತರಿಸಿದ ಮುಖ್ಯಮಂತ್ರಿ ಕೆಸಿಆರ್

08:12 AM May 07, 2020 | Mithun PG |

ಹೈದರಾಬಾದ್: ಭಾರತದಲ್ಲಿ ಲಾಕ್ ಡೌನ್ ನಡುವೆಯೂ ಕೋವಿಡ್ 19 ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಮೇ 29ರ ವರೆಗೆ ವಿಸ್ತರಿಸಿ ಮಂಗಳವಾರ ರಾತ್ರಿ  ಆದೇಶ ಹೊರಡಿಸಿದ್ದಾರೆ. ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಮೇ 17ಕ್ಕೆ ಅಂತ್ಯಗೊಳ್ಳಲಿದೆ.

Advertisement

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ರಾವ್ ಜನರೇ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಕೋರಿಕೊಂಡಿದ್ದಾರೆ. ಈ ನಿರ್ಧಾರದ ಕುರಿತಾಗಿ ಪ್ರಧಾನಿ ಮೋದಿ ಅವರ ಜೊತೆಗೆ ಮಾತನಾಡಿದ್ದು, ಮೇ 29 ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಸಾರ್ವಜನಿಕರು ಸಂಜೆ 6 ಗಂಟೆಯೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಸಂಜೆ 6 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿ ಇರುತ್ತದೆ ಎಂದರು.

ನಾವು ಸಂಪೂರ್ಣವಾಗಿ ವೈದ್ಯಕೀಯ ಉಪಕರಣಗಳನ್ನು ಹೊಂದಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ಆದರೆ ಜನ ನಮಗೆ ಸಹಕರಿಸಬೇಕು. 65 ವರ್ಷ ಮೇಲ್ಪಟ್ಟವರು ವೈದ್ಯಕೀಯ ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮಕ್ಕಳು ಸಹ ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು ಎಂದರು.

ತೆಲಂಗಾಣ ರಾಜ್ಯದ 6 ಜಿಲ್ಲೆಗಳು ರೆಡ್ ಜೋನ್ ನಲ್ಲಿದ್ದು, 18 ಆರೆಂಜ್ ಜೋನ್ ಮತ್ತು 9 ಗ್ರೀನ್ ಜೋನ್ ನಲ್ಲಿವೆ.  3 ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ 1,096 ಸೋಂಕಿತ ಪ್ರಕರಣಗಳು ದಾಖಲಾಗಿದ್ದು 628 ಜನರು ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next