ಜಿನಿವಾ: ಕೋವಿಡ್ -19 ಮಹಾಮಾರಿಗೆ ಜಗತ್ತಿನಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 1 ಲಕ್ಷ ಜನ ಭಾಧಿತರಾಗಿದ್ದು, ಸೋಂಕಿತರ ಸಂಖ್ಯೆ 5.4 ಮಿಲಿಯನ್ ಗೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಒಂದೇ ದಿನ ವಿಶ್ವದಾದ್ಯಂತ 99,780 ಜನರಿಗೆ ವೈರಸ್ ತಗುಲಿದ್ದು 1,486 ಜನರು ಮೃತಪಟ್ಟಿದ್ದಾರೆ. ಅಮೆರಿಕಾದಲ್ಲಿ ಅತೀ ಹೆಚ್ಚು ಸೋಂಕಿತರು ಮತ್ತು ಮೃತರ ಪ್ರಕರಣ ಪತ್ತೆಯಾಗಿದೆ ಎಂದು WHO ತಿಳಿಸಿದೆ.
ವರ್ಲ್ಡ್ ಮೀಟರ್ ಅಂಕಿ ಅಂಶಗಳ ಪ್ರಕಾರ ಅಮೆರಿಕಾದಲ್ಲಿ ಕೋವಿಡ್ ವೈರಸ್ ಗೆ ಮೃತರಾದವರ ಸಂಖ್ಯೆ 1 ಲಕ್ಷ ತಲುಪಿದ್ದು, ಸೋಂಕಿತರ ಸಂಖ್ಯೆ 17.25 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಈ ದೇಶದಲ್ಲಿ 700 ಜನರು ಮೃತಪಟ್ಟಿದ್ದಾರೆ.
ಬ್ರೆಜಿಲ್ ನಲ್ಲೂ ಈ ವೈರಸ್ ನ ಅಟ್ಟಹಾಸ ಮುಂದುವರೆದಿದ್ದು 3.93 ಲಕ್ಷ ಸೋಂಕಿತರ ಮತ್ತು 24 ಸಾವಿರ ಮೃತರ ಪ್ರಕರಣಗಳು ದಾಖಲಾಗಿವೆ. ರಷ್ಯಾದಲ್ಲೂ ಸೋಂಕಿತರ ಸಂಖ್ಯೆ 3.62 ಲಕ್ಷಕ್ಕೆ ಏರಿಕೆಯಾಗಿದ್ದು 3 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು ಟಾಪ್-10 ಹಾಟ್ ಸ್ಪಾಟ್ ಗಳಲ್ಲಿ ಒಂದೆನಿಸಿದೆ.
ಜಗತ್ತಿನಾದ್ಯಂತ ಕೋವಿಡ್ ಕ್ರೌರ್ಯಕ್ಕೆ 3.,52,225 ಜನರು ಬಲಿಯಾಗಿದ್ದು 24,30,593 ಜನರು ಗುಣಮುಖರಾಗಿದ್ದಾರೆ.