ದೊಡ್ಡಬಳ್ಳಾಪುರ: ಕೋವಿಡ್ ಮೂರನೇಅಲೆ ಎದುರಿಸುವ ನಿಟ್ಟಿನಲ್ಲಿ ಆಸ್ಪತ್ರೆಮೊದಲು ವೈದ್ಯಕೀಯ ಸೌಲಭ್ಯ ಹಾಗೂಔಷಧಿ ಸಾಮಗ್ರಿಗಳೊಂದಿಗೆ ನಮ್ಮಎಚ್ಚರಿಕೆಯ ಕ್ರಮಗಳು ಮುಖ್ಯವಾಗಿವೆ.
ಕೊರೊನಾ ಸೋಂಕು ತಡೆಗಟ್ಟುವಲ್ಲಿಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದುಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕ ಹಾಗೂರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಸಿ.ಎಸ್.ಕರೀಗೌಡ ಹೇಳಿದರು.
ನಗರದ ಗ್ರಾಮೀಣ ಅಭ್ಯುದಯ ಸೇವಾಸಂಸ್ಥೆ ವತಿಯಿಂದ ತಾಲೂಕಿನ 13 ಸರ್ಕಾರಿಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂಮೇಕ್ ಶಿಫ್ಟ್ ಆಸ್ಪತ್ರೆಗೆ ಅಗತ್ಯ ಇರುವ 50ಲಕ್ಷ ರೂ. ಮೊತ್ತದ ಉಪಕರಣಗಳನ್ನುಹಸ್ತಾಂತರಿಸಿ ಮಾತನಾಡಿದರು.ಸಾರ್ವಜನಿಕರ ಸೇವೆಯಲ್ಲಿ ಟಾಟಾಸಮೂಹ ದೇಶದÇÉೇ ಮುಂಚೂಣಿಯಲ್ಲಿಇರುವ ಸಂಸ್ಥೆಯಾಗಿದೆ.
ವಿವಿಧಕಂಪನಿಗಳುತಮ್ಮ ಸಿಎಸ್‌ಆರ್ ನಿಧಿಯಡಿ ನೀಡಿರುವನೆರವಿನೊಂದಿಗೆ ಆಸ್ಪತ್ರೆಗಳಿಗೆ ಅಗತ್ಯ ಇರುವಉಪಕರಣಗಳನ್ನು ಗ್ರಾಮೀಣ ಅಭ್ಯುದಯಸೇವಾ ಸಂಸ್ಥೆ ಮೂಲಕ ವಿತರಿಸುತ್ತಿರುವುದುಶ್ಲಾಘನೀಯ ಎಂದರು.
ತಾಲೂಕಿಗೆ ಹೆಮ್ಮೆಯ ಸಂಗತಿ: ತಾಲೂಕಿನಕಲ್ಲುದೇವನಹಳ್ಳಿ ಗ್ರಾಮದ ಸಾಮಾನ್ಯ ರೈತಕುಟುಂಬದ ಕೆ.ಎಚ್.ರಾಮಯ್ಯ ಅವರುರಾಜ್ಯ ಒಕ್ಕಲಿಗರ ಸಂಘದ ಸ್ಥಾಪನೆಯಮುಖ್ಯಸ್ಥರಲ್ಲಿ ಒಬ್ಬರಾಗಿರುವುದು ತಾಲೂಕಿಗೆಹೆಮ್ಮೆ ತರುವ ಸಂಗತಿ. ಕೆಜಿಎಫ್ ಕಾಮಗಾರಿಗಳ ಗುತ್ತಿಗೆದಾರರಾಗಿದ್ದ ಮಾರಪ್ಪ,ಮುನಿಶ್ವಾಮಪ್ಪ ಸಹೋದರು 1906ರಲ್ಲಿಯೇಒಕ್ಕಲಿಗರ ಸಂಘದ ಕೆಲಸಗಳಿಗಾಗಿ 30 ಸಾವಿರದೇಣಿಗೆ ನೀಡುವ ಮೂಲಕ ಸಂಘದ ಪ್ರಗತಿಗೆಭದ್ರ ಬುನಾದಿಯನ್ನು ಹಾಕಿರುವ ಮಹನೀಯರಾಗಿದ್ದಾರೆ ಎಂದು ಸ್ಮರಿಸಿದರು.
ವೈದ್ಯಕೀಯ ಸಾಮಗ್ರಿ ಪೂರೈಕೆ: ಗ್ರಾಮೀಣಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಗೋಪಾಲನಾಯಕ್ ಮಾತನಾಡಿ,ಕೋವಿಡ್ ಮೊದಲಅಲೆಯ ಲಾಕ್‌ಡೌನ್ ಸಂದರ್ಭದಲ್ಲಿಒಂದುವರೆ ತಿಂಗಳ ಕಾಲ ನಗರದಲ್ಲಿನನೂರಾರು ಜನ ಕಾರ್ಮಿಕರಿಗೆ ಊಟದವ್ಯವಸ್ಥೆ ಮಾಡಲಾಗಿತ್ತು.
ಎರಡನೇಅವಧಿಯ ಲಾಕ್‌ಡೌನ್‌ನಲ್ಲಿ ಕಾಮೀಕರುಹಾಗೂ ದಿವ್ಯಾಂಗರಿಗೆ ದಿನಸಿ ಕಿಟ್‌ಗಳನ್ನುನೀಡಲಾಗಿದೆ. ಈಗ ಮೂರನೇ ಅಲೆಯನ್ನುಎದುರಿಸಲು ಅಗತ್ಯ ಇರುವ ವೈದ್ಯಕೀಯಸಾಮಗ್ರಿಗಳನ್ನು ಆಸ್ಪತ್ರೆಗಳಿಗೆನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಕಾರ್ಡ್ ಬ್ಯಾಂಕ್‌ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ…,ಗ್ರಾಮೀಣ ಅಭ್ಯುವೃದ್ಧಿ ಸೇವಾ ಸಂಸ್ಥೆಕಾರ್ಯದರ್ಶಿ ಅಮಲಿನಾಯಕ್, ರಾಜ್ಯರೈತ ಸಂಘದ ಮುಖಂಡರಾದಕೆ.ಸುಲೋಚನಮ್ಮ ವೆಂಕಟರೆಡ್ಡಿ, ತಾಲೂಕುಆರೋಗ್ಯ ಅಧಿಕಾರಿ ಡಾ.ಪರಮೇಶ್ವರ್‌ಹಾಜರಿದ್ದರು.