Advertisement

ಕೋವಿಡ್ ಕೆಲಸ ಮಾಡಿದರೂ ಸೇನಾನಿ ಅಲ್ಲ: ಆತಂಕದಲ್ಲಿ ಕರ್ತವ್ಯ ನಿರತ ಸರಕಾರಿ ಸಿಬಂದಿ

03:01 AM May 17, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಸರಕಾರಿ ನೌಕರರು ಜೀವ ಪಣಕ್ಕಿಟ್ಟಿದ್ದಾರೆ. ಆದರೆ ಇವರೆಲ್ಲರನ್ನೂ ಕೊರೊನಾ ಸೇನಾನಿಗಳು ಎಂದು ಪರಿಗಣಿಸದಿರುವುದು ಸರಕಾರಿ ನೌಕರರಲ್ಲಿ ದುಗುಡಕ್ಕೆ ಕಾರಣವಾಗಿದೆ.
ಸರಕಾರ ಕೆಲವು ಇಲಾಖೆಗಳ ಸಿಬಂದಿ ಯನ್ನು ಸೇನಾನಿಗಳು ಎಂದು ಗುರುತಿಸಿ ಆರೋಗ್ಯ ಸಮಸ್ಯೆ ಅಥವಾ ಜೀವಹಾನಿ ಯಾದರೆ 30 ಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ ಉಳಿದವರನ್ನು ಸೇನಾನಿ ಎಂದು ಪರಿಗಣಿಸುತ್ತಿಲ್ಲ. ಅಲ್ಲದೆ ಕೊರೊನಾ ಕರ್ತವ್ಯದಲ್ಲಿದ್ದಾಗ ಜೀವ ಕಳೆದುಕೊಂಡಿದ್ದರೂ ಅವರ ಕುಟುಂಬಸ್ಥರು 30 ಲಕ್ಷ ವಿಮೆ ಪರಿಹಾರ ಪಡೆಯಲಾಗದಂತಾಗಿದೆ.

Advertisement

ಆದೇಶವಿದ್ದರೂ ಸಿಗದ ಪರಿಹಾರ
ಕೊರೊನಾ ಕರ್ತವ್ಯದ ವೇಳೆ ಕೊರೊನಾಕ್ಕೆ ತುತ್ತಾಗಿ ಸಾವಿಗೀಡಾದರೆ ಎಲ್ಲ ಸಿಬಂದಿಗೂ 30 ಲಕ್ಷ ವಿಮೆ ಪರಿಹಾರ ನೀಡಬೇಕೆಂಬ ಆದೇಶ ಇದೆ. ಆದರೆ ಡಿಸಿ ನೇಮಕಾತಿ ಪತ್ರ ನೀಡಿದ್ದು, ಅಂಥವರು ಸಾವಿಗೀಡಾದಾಗ ಮಾತ್ರ ಪರಿಹಾರ ನೀಡಬೇಕೆಂಬ ನಿಯಮ ಮಾಡಲಾಗಿದೆ.

ಸೇನಾನಿಗಳು ಯಾರ್ಯಾರು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ ಸಿಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು.

ಯಾರು ಅಲ್ಲ?
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆ ಡಿಒಗಳು, ಕಾರ್ಮಿಕ ಇಲಾಖೆಯ ಸಿಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಶಿಕ್ಷಕರು.

ಸೇವೆ ಸಲ್ಲಿಸುತ್ತಿರುವ ಇಲಾಖೆಗಳು
-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
– ವೈದ್ಯ ಕೀಯ ಶಿಕ್ಷಣ ಇಲಾಖೆ
– ಒಳಾ ಡಳಿತ ಇಲಾ ಖೆ  ( ಗೃಹ)
– ಮಹಿಳಾ ಮತ್ತು ಮಕ್ಕಳ ಇಲಾಖೆ
– ಕಂದಾಯ ಇಲಾಖೆ
– ಕಾರ್ಮಿಕ ಇಲಾಖೆ
– ಗ್ರಾಮೀಣಾಭಿವೃದ್ಧಿ, ಪಂ. ರಾಜ್‌ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next