Advertisement

ಕೋವಿಡ್ ಪರಿಹಾರ ಮರೀಚಿಕೆ

07:16 PM Oct 21, 2020 | Suhan S |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದುವರೆಗೂ ಆರೋಗ್ಯ ಇಲಾಖೆಯ 3 ಜನ, ಪೊಲೀಸ್‌ ಇಲಾಖೆಯ ಒಬ್ಬರು ಹಾಗೂ ಶಿಕ್ಷಣ ಇಲಾಖೆಯ 5 ಜನ ಶಿಕ್ಷಕರು ಸೇರಿದಂರೆ 9 ಜನ ಕೋವಿಡ್ ವಾರಿಯರ್ ಮೃತಪಟ್ಟಿದ್ದಾರೆ.

Advertisement

ತರೀಕೆರೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಕೋವಿಡ್ ಡ್ಯೂಟಿಗೆ ತೆರಳುವ ಸಂದರ್ಭದಲ್ಲಿರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಡೂರುತಾಲೂಕು ಕುಂಚನಾಡು ಆಸ್ಪತ್ರೆಯ ಹೆಲ್ತ್‌ ಇನ್ಸ್ ಪೆಕ್ಟರ್‌ ಮತ್ತು ಕಡೂರು ತಾಲೂಕು ಬಾಣೂರು ಆರೋಗ್ಯ ಕೇಂದ್ರದಲ್ಲಿ “ಡಿ’ ಗ್ರೂಪ್‌ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅಜ್ಜಂಪುರ ಪೊಲೀಸ್‌ ಠಾಣೆಯ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀರೂರು ಶೈಕ್ಷಣಿಕ ವಿಭಾಗದಲ್ಲಿ ಮೂವರು, ಕಡೂರು ಶೈಕ್ಷಣಿಕ ವಿಭಾಗದಲ್ಲಿ ಒಬ್ಬರು ಹಾಗೂ ತರೀಕೆರೆ ಶೈಕ್ಷಣಿಕ ವಿಭಾಗದಲ್ಲಿ ಒಬ್ಬರು ಸೇರಿದಂತೆ 5 ಮಂದಿ ಶಿಕ್ಷಕರು ಕೋವಿಡ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಆರೋಗ್ಯ, ಪೊಲೀಸ್‌ ಹಾಗೂ ಶಿಕ್ಷಣ ಇಲಾಖೆಯ ಅನೇಕರಿಗೆ ಸೋಂಕು ತಗುಲಿ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ದೊರಕಿಲ್ಲ ಪರಿಹಾರ: ಕೋವಿಡ್ ವಾರಿಯರ್ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ಕೊರೊನಾ ಸೋಂಕಿನ ಜೊತೆಗೆ ಪ್ರತಿದಿನ ಸೆಣಸಾಟ ನಡೆಸುತ್ತಾರೆ. ಕೋವಿಡ್ ವಾರಿಯರ್ ಮೃತಪಟ್ಟಲ್ಲಿ 50 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯಸರ್ಕಾರವೇ ಘೋಷಿಸಿದೆ. ಜಿಲ್ಲೆಯಲ್ಲಿ ಇದುವರೆಗೂ 9 ಜನ ಕೋವಿಡ್ ವಾರಿಯರ್ ಮೃತಪಟ್ಟಿದ್ದು, ಕೋವಿಡ್ ಬಾಧೆಯಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ನಯಾಪೈಸೆ ಪರಿಹಾರ ದಕ್ಕಿಲ್ಲ. ಕೋವಿಡ್ ಸೋಂಕಿನಿಂದ ಮೃತಪಟ್ಟ ಸಿಬ್ಬಂದಿಗೆ ಸರ್ಕಾರ ಪರಿಹಾರ ನೀಡುವಂತೆ ಆಯಾ ಇಲಾಖೆ ಮುಖ್ಯಸ್ಥರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ,ಪರಿಹಾರ ಮಾತ್ರ ಆ ಕುಟುಂಬಗಳಿಗೆ ದೊರೆತಿಲ್ಲ.

ಆರೋಗ್ಯ ಇಲಾಖೆಯಲ್ಲಿ ಇದುವರೆಗೂ 3 ಜನ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಮತ್ತೂಬ್ಬಸಿಬ್ಬಂದಿ ಕೋವಿಡ್ ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 3 ಜನ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.  -ಡಾ| ಉಮೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next