Advertisement
ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು ಈ ಮಹಾಮಾರಿಗೆ ಈವರೆಗೆ 380ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.
Related Articles
Advertisement
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ವೈದ್ಯರ ರೀತಿಯಲ್ಲಿಯೇ ಕೆಲಸ ಮಾಡುತ್ತಾ ಸದಾ ಕೋವಿಡ್ ಸೋಂಕಿತರ ಆರೈಕೆ ಮಾಡುವ ನರ್ಸ್ ಗಳು, ಮನೆ ಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಸೇರಿದಂತೆ ಆರೋಗ್ಯಇಲಾಖೆಯಲ್ಲಿ ಕೆಲಸ ಮಾಡುವ ಅನೇಕರು ಕೋವಿಡ್ ಮಹಾಮಾರಿ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ, ಇಂದಿಗೂ ಆತಂಕದ ನಡುವೆಯೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನೆರವಾಗುತ್ತಿದ್ದಾರೆ.
ಇಬ್ಬರು ಪೊಲೀಸರ ಸಾವು: ಕೋವಿಡ್ ವಾರಿಯರ್ಸ್ ಗಳಾಗಿ ಪೊಲೀಸರುಕೆಲಸ ಮಾಡುತ್ತಿದ್ದಾರೆ ಲಾಕ್ ಡೌನ್ ವೇಳೆಯಲ್ಲಿ ಜನರಲ್ಲಿ ಅರಿವು ಮೂಡಿಸಿ ಕ್ವಾರಂಟೈನ್ ಪ್ರದೇಶದಲ್ಲಿ ಕೆಲಸ ಮಾಡಿ ಇಂದಿಗೂ ಕೋವಿಡ್ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದಾರೆ, ಕೆಲಸ ಮಾಡುವ ವೇಳೆಯಲ್ಲಿ ಅನೇಕ ಪೊಲೀಸರಿಗೂ ಕೋವಿಡ್ ಸೋಂಕು ಕಾಣಿಸಿ ಕೊಂಡಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಮೂವರು ಶಿಕ್ಷಕರ ಸಾವು: ಸರ್ಕಾರವಿದ್ಯಾಗಮದ ಮೂಲಕ ಮಕ್ಕಳಿಗೆ ಸಾಮಾಜಿಕ ಅಂತರದಲ್ಲಿ ಶಿಕ್ಷಣ ಕಲಿಸುವ ವ್ಯವಸ್ಥೆ ಯಲ್ಲಿ ನಡೆಯುತ್ತಿತ್ತು. ಆದರೆ ಮಹಾಮಾರಿ ಕೋವಿಡ್ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರನ್ನೂ ಬಿಡದೇ ಕಾಡುತ್ತಿದೆ, ಜಿಲ್ಲೆಯಲ್ಲಿ 36 ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡು ಅದರಲ್ಲಿ 30 ಶಿಕ್ಷಕರು ಗುಣಮುಖರಾಗಿದ್ದಾರೆ, ಮೂರು ಜನ ಶಿಕ್ಷಕರು ಮೃತಪಟ್ಟಿದ್ದಾರೆ, ಇದಲ್ಲದೇ ಪ್ರತಿನಿತ್ಯ ನಗರವನ್ನು ಸ್ವಚ್ಛಮಾಡುವ ಪೌರಕಾರ್ಮಿಕರಲ್ಲಿ ಹಲವರಿಗೆ ಕೋವಿಡ್ ಸೋಂಕು ಕಾಣಿಸಿ ಕೊಂಡು ಗುಣಮುಖವಾಗಿದೆ.
ಅದೇ ರೀತಿ ಪದವಿ ಪೂರ್ವ ಕಾಲೇಜುಗಳ 7 ಜನ ಉಪನ್ಯಾಸಕರಿಗೂ ಕೋವಿಡ್ ಸೊಂಕು ತಗುಲಿದೆ. ಪರಿಹಾರ ದೊರೆತಿಲ್ಲ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ವೈದ್ಯರು, ಶಿಕ್ಷಕರು, ಪೊಲೀಸರಿಗೆ ಸರ್ಕಾರ ದಿಂದ ಸಿಗಬೇಕಾಗಿರುವ ಪರಿಹಾರ ಇನ್ನೂ ದೊರೆತ್ತಿಲ್ಲ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳು ಹೇಳುವಂತೆ ಸರ್ಕಾರಕ್ಕೆಮಾಹಿತಿ ಕಳುಹಿಸ ಲಾಗಿದೆ ಅಲ್ಲಿಂದ ಬರಬೇಕುಎನ್ನುತ್ತಾರೆ. ವೈದ್ಯರು ಮೃತಪಟ್ಟುಎರಡು ತಿಂಗಳು ಕಳೆಯುತ್ತಿದ್ದರೂ ಇನ್ನೂ ಪರಿಹಾರ ದೊರೆತ್ತಿಲ
ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ವೈದ್ಯರು, ನರ್ಸ್ ಗಳು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರುಕೆಲಸ ಮಾಡುತ್ತಿದ್ದಾರೆ,ಅದರಲ್ಲಿಕೆಲವರಿಗೆ ಸೋಂಕು ತಗಲಿ ಗುಣಮುಖರಾಗಿದ್ದಾರೆ. ನಮ್ಮ ಇಬ್ಬರು ವೈದ್ಯರು ಮೃತಪಟ್ಟಿದ್ದು ಅವರಿಗೆ ಪರಿಹಾರದ ಬಗ್ಗೆ ಸೂಕ್ತ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. –ಡಾ.ಎಂ.ಬಿ.ನಾಗೇಂದ್ರಪ್ಪ, ಡಿಎಚ್‌ಒ
ಜಿಲ್ಲೆಯಲ್ಲಿ 36 ಶಿಕ್ಷಕರಿಗೆ ಕೋವಿಡ್ ಕಾಣಿಸಿಕೊಂಡು ಅದರಲ್ಲಿ 30 ಶಿಕ್ಷಕರು ಗುಣಮುಖ ರಾಗಿದ್ದಾರೆ. ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಗುಬ್ಬಿ ತಾಲೂಕಿನ ಇಬ್ಬರು ಶಿಕ್ಷಕರು ಮತ್ತು ತುಮಕೂರು ತಾಲೂಕಿನ ಒಬ್ಬರು ಶಿಕ್ಷಕರು ಕೋವಿಡ್ ದಿಂದ ಮೃತಪಟ್ಟಿದ್ದಾರೆ. –ಸಿ.ನಂಜಯ್ಯ, ಡಿಡಿಪಿಐ
-ಚಿ.ನಿ.ಪುರುಷೋತ್ತಮ್