Advertisement

718 ಮಂದಿ ಹಿರಿಯ ನಾಗರಿಕರಿಗೆ ಲಸಿಕೆ

01:32 AM Mar 12, 2021 | Team Udayavani |

ಮಂಗಳೂರು: ಕೋವಿಡ್‌ ನಿರೋಧಕ ಲಸಿಕೆ ಕೊವಿಶೀಲ್ಡ್‌ನ ಮೂರನೇ ಹಂತದಲ್ಲಿ ಲಸಿಕೆ ಪಡೆಯಲು ಹಿರಿಯ ನಾಗರಿಕರಲ್ಲಿ ಉತ್ಸಾಹ ಹೆಚ್ಚಾಗಿದೆ. ಮಾಚ್‌ 1ರಿಂದ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಗುರುವಾರ 60 ವರ್ಷ ಮೇಲ್ಪಟ್ಟ 718 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ 273 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲನೇ ಡೋಸ್‌, 922 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. 6 ಮಂದಿ ಫ್ರಂಟ್‌ ಲೈನ್‌ ವರ್ಕರ್ ಮೊದಲನೇ ಡೋಸ್‌, 84 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಅನಾರೋಗ್ಯ ಹೊಂದಿರುವ 45 ರಿಂದ 60 ವರ್ಷದೊಳಗಿನ 80 ಮಂದಿ ಮತ್ತು 60 ವರ್ಷ ಮೇಲ್ಪಟ್ಟ 718 ಮಂದಿ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದಾರೆ.

Advertisement

ಆಫ್ರಿಕಾ ವೈರಸ್‌: ಮುನ್ನೆಚ್ಚರಿಕೆ :

ಶಿವಮೊಗ್ಗ ಮೂಲದ ವ್ಯಕ್ತಿಗೆ ದಕ್ಷಿಣ ಆಫ್ರಿಕಾ ವೈರಸ್‌ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಹರಡುವಿಕೆ ತಡೆಯುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ತಪಾಸಣ ಕಾರ್ಯ ಮುಂದುವರಿದಿದೆ. ವಿದೇಶಗಳಿಂದ ವಿಮಾನದ ಮೂಲಕ ಮಂಗಳೂರಿಗೆ ಬರುವವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆ ನಡೆಸಿ ಮನೆಗೆ ಕಳುಹಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next