ಮುಂಬಯಿ: ಜಾಗತಿಕ ಮಟ್ಟದ ಧನಾತ್ಮಕ ಬೆಳವಣಿಗೆ ಗಳು, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಷೇರುಗಳಿಗೆ ಕಂಡು ಬಂದ ಹೆಚ್ಚಿನ ಬೇಡಿಕೆಯಿಂದಾಗಿ ಮುಂಬಯಿ ಷೇರುಪೇಟೆಯಲ್ಲಿ ಸಂಭ್ರಮದ ಕುಣಿತ ಕಂಡುಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ.
ಶುಕ್ರವಾರ ಮುಂಬಯಿ ಷೇರುಪೇಟೆ 689.19 ಅಂಕಗಳ ಏರಿಕೆಯೊಂದಿಗೆ 48,782 ಸೂಚ್ಯಂಕದೊಂದಿಗೆ ವಹಿವಾಟು ಮುಗಿಸಿದ್ದರೆ, ನಿಫ್ಟಿ ಕೂಡ 209 ಅಂಕಗಳ ಏರಿಕೆಯ ಜತೆ 14,367 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಚುನಾವಣೆಯಲ್ಲಿ ತಾನು ಸೋತೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತು, ಷೇರುಪೇಟೆಗೆ ಹೊಸ ಚೈತನ್ಯ ತಂದಿತು.
ಚಿನ್ನ , ಬೆಳ್ಳಿ ಇಳಿಕೆ :
ಹೊಸದಿಲ್ಲಿ : ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಗ್ರಾಂಗೆ 614 ರೂ. ಮತ್ತು ಬೆಳ್ಳಿ ಬೆಲೆ ಕೆ.ಜಿ.ಗೆ 1,609 ರೂ. ಇಳಿಕೆಯಾಗಿದೆ. ಪ್ರಸ್ತುತ ದಿಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 49,673 ರೂ.ಗಳಿಗೆ ಇಳಿದಿದ್ದರೆ, ಬೆಳ್ಳಿ ಬೆಲೆ ಕೆ.ಜಿ.ಗೆ 67,518 ರೂ ಗಳಿಗೆ ಇಳಿದಿದೆ. ಡಾಲರ್ ಮೌಲ್ಯ ವೃದ್ಧಿಸಿರುವುದು ಇದಕ್ಕೆ ಕಾರಣ.