Advertisement

ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಸಲು ಅರೋಗ್ಯ ಇಲಾಖೆ ಸಿದ್ಧತೆ

07:03 PM Jan 06, 2021 | Team Udayavani |

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತಲಾ ಏಳು ಆರೋಗ್ಯ ಕೇಂದ್ರಗಳಲ್ಲಿ ಜ.8 (ಶುಕ್ರವಾರ) ಕೊರೊನಾ ಲಸಿಕೆ ಡ್ರೈ ರನ್ (ಅಣಕು) ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಕೇಂದ್ರ ಸರ್ಕಾರವು ಜ.13 ರಂದು ಮೊದಲನೇ ಹಂತದ ಲಸಿಕೆ ವಿತರಣೆಗೆ ಘೋಷಿಸಿದ ಬೆನ್ನೆಲ್ಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಲಸಿಕೆ ವಿತರಣೆ ತಾಲೀಮು ನಡೆಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಈ ಬಾರಿ ಖಾಸಗಿ ಆರೋಗ್ಯ ಕೇಂದ್ರಗಳಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಹಿಂದಿನಂತೆ ಪ್ರತಿ ಆರೋಗ್ಯ ಕೇಂದ್ರಕ್ಕೆ 25 ಆರೋಗ್ಯ ಕಾರ್ಯಕರ್ತರನ್ನು ಫಲಾನುಭವಿಗಳಾಗಿ ನಿಯೋಜಿಸಲಾಗಿದೆ. ಖಾಸಗಿ ಆರೋಗ್ಯ ಕೇಂದ್ರಕ್ಕೆ 100 ಫಲಾನುಭವಿಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಮೊದಲ ಹಂತದ ಡ್ರೈ ರನ್ ಮಾದರಿಯಲ್ಲಿಯೇ ಇದು ಕೂಡಾ ನಡೆಯಲಿದೆ. ಒಟ್ಟಾರೆ ಎರಡನೇ ಹಂತದ ಡ್ರೈ ರನ್‌ನಲ್ಲಿ 200ಕ್ಕೂ ಆರೋಗ್ಯ ಕೇಂದ್ರಗಳು, 5000ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಫಲಾನುಭವಿಗಳು ಭಾಗವಹಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next