Advertisement

ಕೋವಿಡ್‌ ಲಸಿಕೆಗೆ ಸಮರೋಪಾದಿ ಕೆಲಸ

09:46 PM May 15, 2021 | Team Udayavani |

ಹುಬ್ಬಳ್ಳಿ: ದೇಶದ ಜನತೆಗೆ ಕೋವಿಡ್‌ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜುಲೈ ತಿಂಗಳಷ್ಟರಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲಿಯೂ ಆಕ್ಸಿಜನ್‌ ಕೊರತೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಈ ಹಿಂದೆ ವೈದ್ಯಕೀಯವಾಗಿ ಕೇವಲ ಶೇ.1ರಷ್ಟು ಬಳಕೆಯಾಗುತ್ತಿತ್ತು. ಆದರೆ ಇಂದು ಶೇ.7ರಷ್ಟಾಗಿದೆ. ಅದಕ್ಕೆ ಅನುಗುಣವಾಗಿ ಆಕ್ಸಿಜನ್‌ ಉತ್ಪಾದನೆಗೂ ಆದ್ಯತೆ ನೀಡಲಾಗಿದೆ. ರಾಜ್ಯದ 28 ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ. ರೆಮ್‌ಡಿಸಿವಿಯರ್‌ ಮುಂಚೆ 38 ಲಕ್ಷ ಉತ್ಪಾದನೆಯಾಗುತ್ತಿತ್ತು. ಇದೀಗ 1 ಕೋಟಿಗೆ ಉತ್ಪಾದನೆ ಏರಿಸಲಾಗಿದೆ ಎಂದರು.

ಇಲ್ಲಿಯವರೆಗೆ 105 ರೈಲ್ವೆಗಳಲ್ಲಿ ಆಕ್ಸಿಜನ್‌ ಟ್ಯಾಂಕರ್‌ಗಳನ್ನು, ವಿಮಾನಗಳ ಮೂಲಕ 230 ಆಕ್ಸಿಜನ್‌ ಟ್ಯಾಂಕರ್‌ಗಳನ್ನು ವಿವಿಧೆಡೆ ಸರಬರಾಜು ಮಾಡಲಾಗಿದೆ. ವಾಯುಸೇನೆ ಮೂಲಕ 62 ಟ್ಯಾಂಕರ್‌ಗಳಲ್ಲಿ 1142 ಮೆಟ್ರಿಕ್‌ ಟನ್‌ ಆಮ್ಲಜನಕ ಸಾಗಾಟ ಮಾಡಲಾಗಿದೆ. ಪಿಎಂ ಕೇರ್ ಮೂಲಕ 322 ಕೋಟಿ ವೆಚ್ಚದಲ್ಲಿ 1.5 ಲಕ್ಷ ಆಕ್ಸಿಕೇರ್‌ ಸಿಸ್ಟಮ್‌ ಗಳನ್ನು ಖರೀದಿಸಲಾಗಿದೆ. ಜಗತ್ತಿನ 40ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ಸಹಾಯ ಹಸ್ತ ಚಾಚಿವೆ. 2,280 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಬಹೆÅàನ್‌, ಕುವೈತ್‌ ಮತ್ತು ಫ್ರಾನ್ಸ್‌ಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದರು.

ಕೋವಿಡ್‌ 2ನೇ ಅಲೆ ಪ್ರಾರಂಭದಲ್ಲಿ ದೇಶದಲ್ಲಿ ಪ್ರತಿ ದಿನ 5,700 ಟನ್‌ ಆಕ್ಸಿಜನ್‌ ಬೇಡಿಕೆ ಇತ್ತು. ಇಂದು 18,000 ಟನ್‌ವರೆಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲಿ ಪ್ರತಿದಿನ 11,000 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಉತ್ಪಾದನೆ ಮಾಡಲಾಗುತ್ತದೆ. ಪಿಎಂ ಕೇರ್‌ ಮೂಲಕ ಒಟ್ಟು 1594 ಪಿಎಸ್‌ಎ ಆಕ್ಸಿಜನ್‌ ಉತ್ಪಾದಕ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ ವಿವಿಧ ಉದ್ದಿಮೆಗಳಿಂದ ರಾಜ್ಯದ 28 ಜಿಲ್ಲೆಗಳಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಹಣ ನೀಡಿದೆ. ಇನ್ನೂ ಹೆಚ್ಚಿನ ಘಟಕ ರಾಜ್ಯಕ್ಕೆ ಮಂಜೂರು ಮಾಡಲಾಗುವುದು ಎಂದರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next