Advertisement
ನಾನು ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ. ಯಾವುದೇ ಸಮಸ್ಯೆಯಾಗಿಲ್ಲ. ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳುವುದು ಅತಿ ಅಗತ್ಯವಾಗಿದೆ. ಜನರು ಈ ಬಗೆಗಿನ ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಸುರಕ್ಷೆಗೆ ಆದ್ಯತೆ ನೀಡಿ ಲಸಿಕೆ ತೆಗೆದುಕೊಳ್ಳಬೇಕು.–ಡಾ| ಎಚ್.ಎಸ್.ಬಲ್ಲಾಳ್, ಸಹಕುಲಾಧಿಪತಿ ಮಾಹೆ
Related Articles
Advertisement
ಲಸಿಕೆ ತೆಗೆದುಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗದು. ಇತರ ಸಮಸ್ಯೆಗೆ ವೈದ್ಯರನ್ನು ಮುಖತಾ ಭೇಟಿಯಾಗಿ ಸಲಹೆ ಪಡೆದುಕೊಳ್ಳಬಹುದು.
ಒಂದು ಮನೆಯ ಅರ್ಹರೆಲ್ಲರೂ ಒಟ್ಟಿಗೆ ಲಸಿಕೆ ತೆಗೆದುಕೊಳ್ಳುವುದು ಉತ್ತಮವೇ ಅಥವಾ ಬೇರೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುವುದು ಉತ್ತಮವೇ? –ರಮೇಶ್, ಮಂಗಳೂರು
ಬೇರೆ-ಬೇರೆ ದಿನ ತೆಗೆದುಕೊಳ್ಳುವುದಕ್ಕಿಂತ ಒಟ್ಟಿಗೆ ತೆಗೆದುಕೊಳ್ಳುವುದು ಸೂಕ್ತ. ಇದನ್ನು ಆದಷ್ಟು ಬೇಗನೆ ಮಾಡಿದರೆ ಮತ್ತೂ ಒಳ್ಳೆಯದು.
ಅಟೋಇಮ್ಯೂನಿ ಕಾಯಿಲೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ನಾನು ಲಸಿಕೆ ತೆಗೆದುಕೊಳ್ಳಬಹುದೇ?-54 ವರ್ಷದ ವ್ಯಕ್ತಿ, ಉಡುಪಿ
ಇವರು ಅತ್ಯಾವಶ್ಯಕವಾಗಿ ಲಸಿಕೆ ತೆಗೆದುಕೊಳ್ಳಬೇಕು. ಸಂಧಿವಾತ ಕಾಯಿಲೆ ಇರುವವರು ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಾಗದು..
ವಿವಿಧ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಲಸಿಕೆ ಸಂಬಂಧಿಸಿ ಹಲವು ಗೊಂದಲಗಳಿರುತ್ತವೆ. ಅವರು ತಮ್ಮ ವೈದ್ಯರಿಂದ ಸರ್ಟಿಫಿಕೆಟ್ ಪಡೆಯುವ ಬದಲು ಲಸಿಕಾ ಕೇಂದ್ರಗಳಲ್ಲಿಯೇ ಅಗತ್ಯ ಮಾಹಿತಿ ನೀಡಿದರೆ ಉತ್ತಮವಲ್ಲವೇ?– ಥಾಮಸ್, ಊರು ತಿಳಿಸಿಲ್ಲ
ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರು ಲಸಿಕೆ ಪಡೆಯಬಾರದು. ಇತರ ಗಂಭೀರ ಕಾಯಿಲೆಗಳಿಂದ ಬಳಲುವವರು ವೈದ್ಯರ ಸಲಹೆ ಪಡೆದುಕೊಳ್ಳಬಹುದು. ಸದ್ಯಕ್ಕೆ ಲಸಿಕಾ ಕೇಂದ್ರಗಳಲ್ಲಿ ಈಗ ಲಸಿಕೆಯನ್ನಷ್ಟೇ ನೀಡಲಾಗುತ್ತಿದೆ. ಇತರ ರೋಗಗಳಿಗೆ ಸಂಬಂಧಿಸಿ ಮಾಹಿತಿ ನೀಡುವ ವ್ಯವಸ್ಥೆಯಿಲ್ಲ.