Advertisement

ಗುಂಡ್ಲುಪೇಟೆ: 4,494 ಮಕ್ಕಳಿಗೆ ಲಸಿಕೆ ವಿತರಣೆ

11:59 AM Jan 04, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನಲ್ಲಿ ಮೊದಲ ದಿನ 4,494 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 2233 ಬಾಲಕಿಯರು ಹಾಗೂ 2261 ಬಾಲಕರು ಲಸಿಕೆ ಪಡೆದಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ತಿಳಿಸಿದರು.

Advertisement

ಪಟ್ಟಣದ ದೊಡ್ಡಹುಂಡಿ ಬೋಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 8,560 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ಎಲ್ಲರಿಗೂ ಕೊವ್ಯಾಕ್ಸಿನ್‌ನೀಡಲಾಗುತ್ತಿದೆ. ಲಸಿಕೆ ಪಡೆದ ನಂತರ ಜ್ವರ ಬಂದರೂಹೆದರಿಕೆ ಪಡುವ ಅಗತ್ಯವಿಲ್ಲ. ಚಿಕಿತ್ಸೆ ಪಡೆದು ಕೊಂಡರುಗುಣಮುಖರಾಗಬಹುದು ಎಂದರು.

ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಸ್‌.ನಿರಂಜನ ಕುಮಾರ್‌, ಮುನ್ನೆಚ್ಚರಿಕೆಯಿಂದ ಲಸಿಕೆ ಪಡೆದುಕೊಳ್ಳುವುದು ಉತ್ತಮ ಎಂದರು. ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಉಪಾಧ್ಯಕ್ಷೆದೀಪಿಕಾ ಅಶ್ವಿ‌ನ್‌, ತಹಶೀಲ್ದಾರ್‌ ರವಿಶಂಕರ್‌, ತಾಪಂ ಇಒಶ್ರೀಕಂಠರಾಜೇ ಅರಸ್‌, ಪುರಸಭೆ ಮುಖ್ಯಾಧಿಕಾರಿಹೇಮಂತ್‌ ರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.ಶಿವಮೂರ್ತಿ, ಪುರಸಭಾ ಸದಸ್ಯರಾದ ರಮೇಶ್‌,ಅಣ್ಣಯ್ಯಸ್ವಾಮಿ, ಕಿರಣ್‌, ಎಸಿxಎಂಸಿ ಉಪಾಧ್ಯಕ್ಷ ಮಹೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next