Advertisement

ಲಸಿಕೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ದಿವ್ಯಾಂಗರ ಹಿಂದೇಟು

05:39 PM Jun 11, 2021 | Team Udayavani |

ಯಳಂದೂರು: ತಾಲೂಕಿನ ದಿವ್ಯಾಂಗರಿಗೆ ಕೋವಿಡ್‌ ಲಸಿಕೆ ಹಾಕಿಸಲು ಪೋಷಕರು ಹಾಗೂ ಕುಟುಂಬದವರು ಭಯ ಪಡುತ್ತಿದ್ದಾರೆ.

Advertisement

ತಾಲೂಕಿನಲ್ಲಿ 12 ಗ್ರಾಪಂಗಳಿವೆ. ಇದರಲ್ಲಿದುಗ್ಗಹಟ್ಟಿ 145, ಗೌಡಹಳ್ಳಿ- 192, ಗುಂಬಳ್ಳಿ-146,ಬಿಳಿಗಿರಿರಂಗನಬೆಟ್ಟ-47, ಅಗರ-110,ಮದ್ದೂರು-103, ಮಾಂಬಳ್ಳಿ-114, ಕೆಸ್ತೂರು-128,ಯರಗಂಬಳ್ಳಿ-163, ಹೊನ್ನೂರು-151,ಯರಿಯೂರು 117, ಅಂಬಳೆ-127, ಯಳಂದೂರುಪಟ್ಟಣ 194 ಸೇರಿ ಒಟ್ಟು 1,737 ದಿವ್ಯಾಂಗರು ಇಲ್ಲಿದ್ದಾರೆ. ಆದರಲ್ಲಿ 18 ವರ್ಷ ಮೇಲ್ಪಟ್ಟವರ ಒಟ್ಟು1285 ಜನರಿದ್ದು ಇದರಲ್ಲಿ 715 ಜನರು ಮೊದಲಡೋಸ್‌ ಪಡೆದುಕೊಂಡಿದ್ದಾರೆ. ಬಾಕಿ ಉಳಿದ 570ಜನರು ಲಸಿಕೆ ಪಡೆಯಲು ಭಯಪಡುತ್ತಿದ್ದಾರೆ.

ಸಹಿ ಭಯ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿಲಸಿಕೆ ಪಡೆಯಲು ದಿವ್ಯಾಂಗರು ಹಾಗೂ ಕುಟುಂಬಸದಸ್ಯರನ್ನು ಕಡ್ಡಾಯವಾಗಿ ಒಪ್ಪಿಸಬೇಕಾಗಿದೆ. ಇದಕ್ಕೆಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸುವುದು ಕಡ್ಡಾಯವಾಗಿದೆ.ಕೆಲವರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಏನಾದರೂ ಹೆಚ್ಚುಕಡಿಮೆಯಾದರೆ ನೀವು ಜವಾಬ್ದಾರರಾ? ಹಾಗಿದ್ದರೆನಮಗೂ ಸಹಿ ಮಾಡಿಕೊಡಿ ಎಂದು ಒತ್ತಡವನ್ನುಹಾಕುತ್ತಿದ್ದಾರೆ. ತಾಲುಕಿನ ವಿವಿಧ ಗ್ರಾಮಗಳಲ್ಲಿ 18ವರ್ಷ ಮೇಲ್ಪಟ್ಟವರ ಒಟ್ಟು 1285 ಜನರಲ್ಲಿ 715ಜನರು ಲಸಿಕೆ ಪಡೆದುಕೊಂಡಿದ್ದಾರೆ. ಬಾಕಿ ಉಳಿದ570 ಜನರು ಲಸಿಕೆ ಪಡೆಯಬೇಕಾಗಿದೆ ಈ ಬಗ್ಗೆ ಅವರಿಗೆ ಮನವೊಲಿಸುವ ಕೆಲಸವನ್ನುಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ವಿಶೇಷಚೇತನ ಪುನರ್‌ವಸತಿ ತಾಲೂಕುಸಂಯೋಜಕಿ ಮಹದೇವಮ್ಮ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಪುನರ್‌ವಸತಿ ಕಾರ್ಯಕರ್ತರಿಗೆ ಕಳೆದ 4 ತಿಂಗಳಿಂದಲೂ ವೇತನ ನೀಡಿಲ್ಲ.ಇದರಿಂದ ಜೀವನ ಸಾಗಿಸುವ ಕಷ್ಟವಾಗುತ್ತಿದೆ.ಸಕಾಲದಲ್ಲಿ ವೇತನ ನೀಡಬೇಕು ಎಂದು ಕಾರ್ಯಕರ್ತಮದ್ದೂರು ಮಂಜುನಾಥ್‌ ಮನವಿ ಮಾಡಿದರು.ಜಾಗೃತಿ: ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲುದಿವ್ಯಾಂಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ರಾಜ್ಯದಲ್ಲಿ ಚಾಮರಾಜನಗರ ಈ ವಿಭಾಗದಲ್ಲಿ ಲಸಿಕೆನೀಡುವಲ್ಲಿ 4 ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಶೇ.59ಪ್ರಗತಿ ಸಾಧಿಸಲಾಗಿದೆ. ಒಟ್ಟು 20,464ದಿವ್ಯಾಂಗರಿದ್ದಾರೆ. 18 ವರ್ಷ ಮೇಲ್ಪಟ್ಟವರು15,014ಮಂದಿ ಇದ್ದಾರೆ. ಇದರಲ್ಲಿ 8,859 ಜನರು ವ್ಯಾಕ್ಸಿನ್‌ಪಡೆದಿದ್ದಾರೆ. ಉಳಿದವರಿಗೂ ಶೀಘ್ರ ಲಸಿಕೆಹಾಕಿಸಲಾಗುವುದು ಎಂದು ಜಿಲ್ಲಾ ಅಂಗವಿಕಲಕಲ್ಯಾಣಾಧಿಕಾರಿ ತಿಪ್ಪಯ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next