Advertisement
ಲಸಿಕೆ ವಿತರಣೆಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.
Related Articles
ರಾಜ್ಯಕ್ಕೆ ಮೊದಲ ಮತ್ತು 2ನೇ ಡೋಸ್ ಸೇರಿ ಒಟ್ಟು 9.9 ಕೋಟಿ ಡೋಸ್ ಲಸಿಕೆ ಬೇಕಿದೆ. ಹೆಚ್ಚು ಪೂರೈಕೆಯಾದರೆ ನಿತ್ಯ 10 ಲಕ್ಷ ಮಂದಿಗೆ ಲಸಿಕೆ ನೀಡುವ ಮೂಲಕ ಆಗಸ್ಟ್ ಅಂತ್ಯದೊಳಗೆ ಎಲ್ಲರಿಗೂ ಮೊದಲ ಡೋಸ್, ಅಕ್ಟೋಬರ್ ಒಳಗೆ ಎರಡನೇ ಡೋಸ್ ಪೂರ್ಣಗೊಳಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Advertisement
2ನೇ ಡೋಸ್‌ಗೆ ಹೆಚ್ಚಿದ ಬೇಡಿಕೆರಾಜ್ಯದಲ್ಲಿ ದಾಸ್ತಾನು ಕೊರತೆಯಿಂದ 2ನೇ ಡೋಸ್ ಪಡೆಯುವವರಿಗೂ ಸಕಾಲದಲ್ಲಿ ಲಸಿಕೆ ಸಿಗದಂತಾಗಿದೆ. ಶೇ. 88ರಷ್ಟು ಕೊವಿಶೀಲ್ಡ್ ಲಸಿಕೆ ನೀಡಲಾಗಿದೆ. ಇದರ ಮೊದಲ ಡೋಸ್ ಪಡೆದವರು 84 ದಿನಗಳ ಬಳಿಕ 2ನೇ ಡೋಸ್ ಪಡೆಯಬೇಕು. ಎಪ್ರಿಲ್ ಕೊನೆಯ 2 ವಾರ 25 ಲಕ್ಷ ಮಂದಿ ಕೊವಿಶೀಲ್ಡ್ ಮೊದಲ ಡೋಸ್ ಪಡೆದಿದ್ದು, ಈಗ 2ನೇ ಡೋಸ್ ಪಡೆಯಬೇಕಿತ್ತು. ಈ ಪೈಕಿ ಅರ್ಧದಷ್ಟು ಜನರಿಗೆ ಲಸಿಕೆ ಸಿಕ್ಕಿಲ್ಲ. ಮೇ ತಿಂಗಳ ಮೊದಲ 2 ವಾರಗಳಲ್ಲಿ ಲಸಿಕೆ ಪಡೆದ 25 ಲಕ್ಷ ಮಂದಿಗೆ ಮುಂದಿನ ತಿಂಗಳು 2ನೇ ಡೋಸ್ ನೀಡಬೇಕಿದೆ. ಹೀಗಾಗಿ ರಾಜ್ಯಕ್ಕೆ 2ನೇ ಡೋಸ್‌ಗೆಂದು ಅರ್ಧಕೋಟಿ ಲಸಿಕೆಯ ಆವಶ್ಯಕತೆ ಇದೆ.