Advertisement

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

09:22 PM Jun 22, 2021 | Team Udayavani |

ಮಂಡ್ಯ: ಸೋಮವಾರದಿಂದ ಜಿಲ್ಲೆಯಾದ್ಯಂತಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಅದರಂತೆಮಂಡ್ಯ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದಶಾಸಕರಾದ ಎಂ.ಶ್ರೀನಿವಾಸ್‌ ಹಾಗೂ ಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದರು.

Advertisement

ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿರುವಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಆರೋಗ್ಯಇಲಾಖೆ ವತಿಯಿಂದ ಕೋವಿಡ್‌-19 ವಿಶೇಷ ಲಸಿಕಾಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಎಂ.ಶ್ರೀನಿವಾಸ್‌ಚಾಲನೆ ನೀಡಿದರೆ, ಹೊಳಲು ಗ್ರಾಮದಲ್ಲಿ ಶಾಸಕಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದರು.

ಶಾಸಕ ಎಂ.ಶ್ರೀನಿವಾಸ್‌ ಮಾತನಾಡಿ, ಕೋವಿಡ್‌ಲಸಿಕೆ ಪಡೆದಲ್ಲಿ ಯಾವುದೇ ಅಡ್ಡಪರಿಣಾಮವೂ ಇಲ್ಲ.ಭಯ ಬೇಡ, ಎಲ್ಲರೂ ಲಸಿಕೆ ಪಡೆದು ಕೋವಿಡ್‌ಸೋಂಕಿನಿಂದ ದೂರ ಇರಿ ಎಂದು ಸಲಹೆ ನೀಡಿದರು.ನಗರಸಭಾಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ,ಮುಸ್ಲಿಮರಲ್ಲಿ ಲಸಿಕೆ ಬಗ್ಗೆ ಒಂದಷ್ಟು ಗೊಂದಲಗಳುಇದ್ದವು. ಹಾಗಾಗಿ ಯಾರೂ ಲಸಿಕೆ ಪಡೆಯಲು ಮಂದೆಬರುತ್ತಿರಲಿಲ್ಲ.

ಇದನ್ನು ಮನಗಂಡ ಶಾಸಕ ಶ್ರೀನಿವಾಸ್‌ಅವರು ಮುಸ್ಲಿಂ ಧರ್ಮಗುರುಗಳ ಮೂಲಕ ಸಂದೇಶರವಾನಿಸಿದ್ದಾರೆ. ಎಲ್ಲರೂ ಲಸಿಕೆ ಪಡೆಯುವಂತೆ ಅವರಮೂಲಕ ಅರಿವು ಮೂಡಿಸಿದ್ದಾರೆ ಎಂದು ಹೇಳಿದರು.ನಗರಸಭಾ ಸದಸ್ಯ ಜಾಕೀರ್‌ ಪಾಷ, ನಗರಸಭೆಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next