Advertisement

ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಯೋಜನೆ

07:48 PM Jun 22, 2021 | Team Udayavani |

ಮದ್ದೂರು: 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ನೀಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿಪ್ರತಿಯೊಬ್ಬರಿಗೂ ಹಂತ ಹಂತವಾಗಿ ಲಸಿಕೆ ವಿತರಿಸಲು ಯೋಜನೆ ರೂಪಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವಕೆ.ಸಿ. ನಾರಾಯಣಗೌಡ ತಿಳಿಸಿದರು.

Advertisement

ಮದ್ದೂರು ಪಟ್ಟಣದ ಶಾಂತ ಮರಿಯಪ್ಪವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ನಡೆದ ಲಸಿಕಾ ಆಂದೋಲನಕ್ಕೆ ಸೋಮವಾರಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ55 ಸಾವಿರ ಮಂದಿಗೆ ಲಸಿಕೆ ಹಾಕಿಸುವಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ 18ವರ್ಷದ ವಯೋಮಾನದವರಿಗೂ ಲಸಿಕೆ ಹಾಕಲುಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು ಪ್ರತಿಯೊಬ್ಬರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವಂತೆ ಮನವಿ ಮಾಡಿದರು.

ಮೈಷುಗರ್‌ ಸಕ್ಕರೆ ಕಾರ್ಖಾನೆ ಆರಂಭಿಸಲು ಲಾಕ್‌ಡೌನ್‌ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾರ್ಖಾನೆಆರಂಭಿಸಲು ಮುಂದಾಗುವುದಾಗಿ ತಿಳಿಸಿದರಲ್ಲದೇಮನ್‌ಮುಲ್‌ನಲ್ಲಿ ನಡೆದ ಹಗರಣವನ್ನು ಈಗಾಗಲೇಉನ್ನತಮಟ್ಟದ ತನಿಖೆ ನಡೆಸುತ್ತಿರುವುದಾಗಿ ಹೇಳಿದರು. ಈ ವೇಳೆ ಶಾಸಕ ಡಿ.ಸಿ. ತಮ್ಮಣ್ಣ, ಜಿಲ್ಲಾಧಿಕಾರಿಅಶ್ವಥಿ, ಜಿಪಂ ಸಿಇಒ ಜಿ.ಆರ್‌.ದಿವ್ಯಪ್ರಭು, ಜಿಲ್ಲಾಆರೋಗ್ಯಾಧಿಕಾರಿ ಡಾ.ಟಿ. ಧನಂಜಯ್ಯ, ತಹಶೀಲ್ದಾರ್‌ ಎಚ್‌.ಬಿ.ವಿಜಯಕುಮಾರ್‌, ಪುರಸಭೆ ಅಧ್ಯಕ್ಷಸುರೇಶ್‌ಕುಮಾರ್‌, ಸದಸ್ಯರಾದ ಪ್ರಸನ್ನ, ವನಿತಾ,ಪ್ರಮೀಳಾ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್‌.ಆಶಾಲತಾ, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿಬಾಲಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next