Advertisement

ಕಳಸ ಪೊಲೀಸ್‌ ಠಾಣೆಯ ನಾಲ್ವರು ಸಿಬ್ಬಂದಿಗೆ ಕೋವಿಡ್

12:27 PM Jul 22, 2020 | Suhan S |

ಮೂಡಿಗೆರೆ: ಕಳಸ ಪೊಲೀಸ್‌ ಠಾಣೆಯ ನಾಲ್ವರು ಸಿಬ್ಬಂದಿಗಳಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಸಿಬ್ಬಂದಿಗಳಿಗೆ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಳಸ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ಠಾಣೆಯಿಂದ ನೂರು ಮೀಟರ್‌ ವ್ಯಾಪ್ತಿಯ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದ್ದು, ಪೊಲೀಸ್‌ ಠಾಣೆ ಹಾಗೂ ಕೆ.ಎಂ. ರಸ್ತೆಯನ್ನು ಸ್ಯಾನಿಟೈಸ್‌ ಮಾಡಲಾಯಿತು. ಸೋಂಕಿತರನ್ನು ಚಿಕ್ಕಮಗಳೂರು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಪ್ರಥಮ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಪರಿಶೀಲನೆಗೆ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಿಗೆ ಹೋಂ ಕ್ವಾರಂಟೈನ್‌ ಮಾಡುವಂತೆ ಸೂಚಿಸಲಾಗಿದೆ. ವೈದ್ಯ ಡಾ| ಪ್ರೇಮ್‌ ಕುಮಾರ್‌, ಕಂದಾಯ ನಿರೀಕ್ಷಕ ಅಜ್ಜೆಗೌಡ, ಪಿಡಿಒ ಕವೀಶ್‌, ಲೆಕ್ಕ ಪರಿಶೋಧಕ ಸಂತೋಷ್‌, ವಿ.ಎ. ಪ್ರಸನ್ನ ಇದ್ದರು.

ಕಳಸದ ಜನತೆಯಲ್ಲಿ ಹೆಚ್ಚಿದ ಆತಂಕ: ಕಳಸದ ಮುಖ್ಯ ರಸ್ತೆಯಲ್ಲಿಯೇ ಇರುವ ಪೊಲೀಸ್‌ ಠಾಣೆಯ ನಾಲ್ವರು ಪೊಲೀಸರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಹಜವಾಗಿ ಕಳಸ ಊರಿನ ಜನತೆಯಲ್ಲಿ ಆತಂಕ ಮನೆಮಾಡಿದೆ. ಈ ಹಿಂದೆ ನಾಲ್ವರಿಗೆ ಸೋಂಕು ದೃಢಪಟ್ಟು ಅವರು ಗುಣಮುಖರಾಗಿ ಹಿಂತಿರುಗಿ ಬಂದ ಸ್ವಲ್ಪದರಲ್ಲಿಯೇ ಮತ್ತೆ ನಾಲ್ವರಿಗೆ ಸೋಂಕು ದೃಢಪಟ್ಟಿರುವುದು, ಅದರಲ್ಲಿಯೂ ಸದಾ ಸಾರ್ವಜನಿಕ ಸಂಪರ್ಕದಲ್ಲಿ ಇರಬೇಕಾದ ಪೊಲೀಸರಿಗೆ ಸೋಂಕು ದೃಢಪಟ್ಟಿರುವುದು ಜನರ ನಿದ್ದೆಗೆಡಿಸಿದೆ. ಕಳಸ ಪ್ರವಾಸಿ ತಾಣವಾಗಿದ್ದು ತಾಲೂಕಿಗೆ ಬರುವ ಪ್ರವಾಸಿಗರನ್ನು ತಪಾಸಣೆ ಮಾಡುವ ವೇಳೆಯಲ್ಲಿ ಸೋಂಕು ಹರಡಿರಬಹುದು ಅಥವಾ ಹೊರ ರಾಜ್ಯಕ್ಕೆ ಕರ್ತವ್ಯಕ್ಕೆ ತೆರಳಿದಾಗ ಸೋಂಕು ತಗುಲಿತ್ತೋ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next