Advertisement

ಯಲವಟ್ಟಿ ಗ್ರಾಮದ ನಾಲ್ವರಿಗೆ ಕೋವಿಡ್

12:55 PM Jul 20, 2020 | Suhan S |

ಮಲೇಬೆನ್ನೂರು: ಸಮೀಪದ ಯಲವಟ್ಟಿ ಗ್ರಾಮದ ನಾಲ್ಕು ಜನರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ.

Advertisement

ಯಲವಟ್ಟಿ ಗ್ರಾಮದ 66 ವರ್ಷದ ವೃದ್ಧರೊಬ್ಬರು ಇತ್ತೀಚೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಆ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್‌ ದೃಢಪಟ್ಟ ಹಿನ್ನಲೆಯಲ್ಲಿ ಯಲವಟ್ಟಿಯಲ್ಲಿರುವ ಅವರ ಕುಟುಂಬದವರಲ್ಲಿ 19 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಅಕ್ಕಪಕ್ಕದ ಮೂರು ಮನೆಗಳನ್ನು ಸೀಲ್‌ ಡೌನ್‌ ಮಾಡಲಾಗಿತ್ತು. ಕ್ವಾರೆಂಟೈನ್‌ ಗೊಳಪಟ್ಟಿದ್ದವರಲ್ಲಿ ಭಾನುವಾರ ಮೂವರು ಮಹಿಳೆಯರು ಮತ್ತು ಪುರುಷನಲ್ಲಿ ಕೋವಿಡ್ ಪಾಸಿಟಿವ್‌ ದೃಢಪಟ್ಟಿದೆ.

ಅವರಲ್ಲಿ ಒಬ್ಬ ಮಹಿಳೆಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಹಾಗೂ ಉಳಿದ ಮೂವರನ್ನು ಹರಿಹರದ ಗುತ್ತೂರಿನಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಿಕೊಡಲಾಗಿದೆ. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ನಿವಾಸಿ ಮಲೇಬೆನ್ನೂರು ಸಮೀಪದ ನಿಟ್ಟೂರು ಗ್ರಾಮದಲ್ಲಿರುವ ಅಕ್ಕನ ಮನೆಗೆ ಬಂದಿದ್ದಾನೆ. ಆಗ ಆತನಿಗೆ ಕೋವಿಡ್ ಪಾಸಿಟಿವ್‌ ಎಂದು ತಿಳಿದು ಬಂದಿದ್ದು, ಮನೆಯಲ್ಲಿದ್ದವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಹರಳಹಳ್ಳಿ ಮತ್ತು ನಿಟ್ಟೂರು ಹಾಗೂ ಯಲವಟ್ಟಿ ಗ್ರಾಮಗಳಲ್ಲಿ ಪಾಸಿಟಿವ್‌ ಬಂದಿರುವ ಮನೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಉಪತಹಶೀಲ್ದಾರ್‌ ಆರ್‌. ರವಿ, ರಾಜಸ್ವ ನಿರೀಕ್ಷಕ ಸಮೀರ್‌, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್‌, ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಎಎಸ್‌ಐ ಬಸವರಾಜಪ್ಪ, ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರೇಖಾ, ಆಶಾ ಕಾರ್ಯಕರ್ತೆಯರು, ಯಲವಟ್ಟಿ ಗ್ರಾಮದ ಪಿಡಿಒ ರಾಮನಗೌಡ, ಬಸವರಾಜ ಪೂಜಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next