Advertisement

ಒಂದೇ ದಿನ 51 ಜನರಿಗೆ ಕೋವಿಡ್ ಮಹಾಮಾರಿ

09:57 AM Jul 06, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಒಂದೇ ದಿನ 51 ಜನರಲ್ಲಿ ಸೋಂಕು ದೃಢ ಪಡುವ ಮೂಲಕ ಕೋವಿಡ್ ಮಹಾಸ್ಫೋಟ ವಾಗಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 558ಕ್ಕೇರಿದೆ.

Advertisement

ಭಾನುವಾರ 51 ಜನರಿಗೆ ಸೋಂಕು ದೃಢಪಟ್ಟು ಒಟ್ಟು ಸೋಂಕಿತರ ಸಂಖ್ಯೆ 558ಕ್ಕೆ ಏರಿಕೆಯಾದ ಬೆನ್ನಲ್ಲೇ ಇದೇ ದಿನ 30 ಜನರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಬಿಡುಗಡೆಯಾದವರು ಸೇರಿದಂತೆ ಈವರೆಗೆ ಕೋವಿಡ್‌ ಆಸ್ಪತ್ರೆಯಲ್ಲಿದ್ದ ಸೋಂಕಿತರಲ್ಲಿ 404 ಜನರು ಸೋಂಕುಮುಕ್ತರಾಗಿ ಮನೆಗೆ ಮರಳಿದಂತಾಗಿದೆ. ಇದರ ಮಧ್ಯೆ ಸೋಂಕಿತರಲ್ಲಿ ಈವರೆಗೆ ಮೃತಪಟ್ಟ 11 ಜನರ ಹೊರತಾಗಿಯೂ 143 ಸೋಂಕಿತರಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ ಕಳೆದ ವಾರ ಕೋವಿಡ್‌ ಸೋಂಕಿನಿಂದ ಮೃತಪಟ್ಟಿರುವ ಸೋಂಕಿತ ಸಿಬ್ಬಂದಿಯ ಸಂಪರ್ಕದಿಂದ ಮಹಿಳಾ ವಿಶ್ವವಿದ್ಯಾಲಯದಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next