Advertisement

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

12:26 AM Oct 24, 2020 | mahesh |

ಹೊಸದಿಲ್ಲಿ: ದೇಶದ ಕೋವಿಡ್ ವೈರಸ್‌ ಸ್ಥಿತಿಯನ್ನು ನಿರ್ಧರಿಸುವಲ್ಲಿ ಮುಂದಿನ 3 ತಿಂಗಳು ನಿರ್ಣಾಯಕ ವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಹೇಳಿದ್ದಾರೆ. ಜತೆಗೆ, ಹಬ್ಬಗಳ ವೇಳೆ ಹಾಗೂ ಚಳಿಗಾಲದಲ್ಲಿ ದೇಶವಾಸಿ ಗಳೆಲ್ಲರೂ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

Advertisement

ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ 95 ಸಾವಿರದಿಂದ ಈಗ 55 ಸಾವಿರಕ್ಕಿಳಿದಿದೆ. ಸೋಂಕು ದ್ವಿಗುಣ ಗೊಳ್ಳುವಿಕೆಯ ದರವೂ 97.2 ದಿನಗಳಿಗೆ ಏರಿಕೆಯಾಗಿದೆ. ದೇಶದಲ್ಲೀಗ 7 ಲಕ್ಷಕ್ಕಿಂತಲೂ ಕಡಿಮೆ ಸಕ್ರಿಯ ಸೋಂಕಿತರಿದ್ದಾರೆ. ಮರಣ ಪ್ರಮಾಣವೂ ಶೇ.1.51ಕ್ಕಿಳಿದಿದೆ. ಇವೆಲ್ಲವೂ ನಾವು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದ್ದೇವೆ ಎಂಬುದರ ಸೂಚಕವಾಗಿದೆ ಎಂದಿದ್ದಾರೆ ಹರ್ಷವರ್ಧನ್‌.

ಪಾಸಿಟಿವಿಟಿ ದರ ಇಳಿಕೆ: ಭಾರತದಲ್ಲಿನ ಕೊರೊನಾ ಪಾಸಿಟಿವಿಟಿ ದರ ಈಗ ಶೇ.7.75ಕ್ಕಿಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಗುರುವಾರದಿಂದ ಶುಕ್ರವಾರಕ್ಕೆ 24 ಗಂಟೆಗಳಲ್ಲಿ 54,366 ಮಂದಿಗೆ ಸೋಂಕು ದೃಢಪಟ್ಟಿದ್ದು, 690 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ 69.48 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next