ಬೆಂಗಳೂರು: ರಾಜ್ಯದಲ್ಲಿ ಐಸಿಎಂಆರ್ ಸೂಚನೆಯಂತೆ ಆರೋಗ್ಯ ಇಲಾಖೆ ಕೇವಲ ಲಕ್ಷಣ ಹೊಂದಿರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದರೂ, ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಲಕ್ಷಣ ರಹಿತ ಗರ್ಭಿಣಿಯರಿಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆಗೆ ಮಾರ್ಗಸೂಚಿ ಪರಿಷ್ಕೃತಗೊಳಿಸಿ ಕೊರೊನಾ ಲಕ್ಷಣಹೊಂದಿರುವವರಿಗೆ ಮಾತ್ರ ಕಡ್ಡಾಯವಾಗಿ ಕೊರೊನಾಪರೀಕ್ಷೆಗೆ ಒಳಗಾಗುವಂತೆ ಹಾಗೂ ತುರ್ತು ಶಸ್ತ್ರ ಚಿಕಿತ್ಸೆ,ಹೆರಿಗೆ ಸಂದರ್ಭದಲ್ಲಿ ಅಗತ್ಯವಿದ್ದರೆ ಆದ್ಯತೆಯ ಮೇರೆಗೆಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆಲಕ್ಷಣವಿಲ್ಲದ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆಯನ್ನು ನಡೆಸದಂತೆ ಆದೇಶಿಸಲಾಗಿದೆ.
ಆದರೆ, ನಗರದ ಕೆಲ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದಮಾರ್ಗಸೂಚಿಯನ್ನು ಪಾಲನೆ ಮಾಡುತ್ತಿಲ್ಲ. ಒಂದರಿಂದ8 ತಿಂಗಳು ಗರ್ಭಿಣಿಯಲ್ಲಿ ಪ್ರತಿ ತಿಂಗಳುಹಾಗೂ 9 ತಿಂಗಳು ಗರ್ಭಿಣಿಯರಲ್ಲಿ ವಾರದಲ್ಲಿ ಒಮ್ಮೆ ವೈದ್ಯರ ತಪಾಸಣೆಗೆ ಬರುವ ಕೋವಿಡ್ ಲಕ್ಷಣ ರಹಿತ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆ ವರದಿ ಸಲ್ಲಿಕೆ ಮಾಡುವಂತೆ ಹೇಳಲಾಗು ತ್ತಿದೆ. ಕೋವಿಡ್ ಪರೀಕ್ಷೆಮಾಡಿಸಲು ಒಪ್ಪದ ಮಹಿಳೆಯರನ್ನು ಈಬಗ್ಗೆ ಪ್ರಶ್ನಿಸಿದರೆ, ಇಷ್ಟವಿದ್ದರೆ ಪರೀಕ್ಷೆ ಮಾಡಿಸಿ ಎನ್ನುವುದಾಗಿ ಆರೋಗ್ಯಾಧಿಕಾರಿಗಳು ಉತ್ತರಿ ಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇರದವರು ಪರೀಕ್ಷೆಯಿಂದ ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಯಾರಿಗೆ ಪರೀಕ್ಷೆ: ಸೋಂಕಿನ ಲಕ್ಷಣ ಇರುವವರಿಗೆ, ಲ್ಯಾಬ್‌ಗಳಲ್ಲಿ ಖಾತ್ರಿಯಾದ ಅಪಾಯಕಾರಿ ಸೋಂಕಿತರ ಸಂಪರ್ಕಕ್ಕೆ ಬಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಸಹ- ಅಸ್ವಸ್ಥೆಗಳಾದ ಮಧುಮೇಹಸೇರಿದಂತೆ ಇತರೆ ಮಾರಣಾಂತಿಕ ಕಾಯಿಲೆಯಿಂದ ಬಳಲುವವರಿಗೆ, ವಿದೇಶಕ್ಕೆ ತೆರಳುವವರಿಗೆ,ವಿದೇಶಿದಿಂದ ಬಂದವರು ಮಾತ್ರ ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಬೇಕು. ಸಮುದಾಯ ಮಟ್ಟದಲ್ಲಿ ರೋಗ ಲಕ್ಷಣವಿಲ್ಲದವರಿಗೆ, ಸೋಂಕಿತರ ಸಂಪ ರ್ಕಕ್ಕೆ ಬಂದಹಿರಿಯ ನಾಗರಿಕರು ಹಾಗೂ ಸಹ ಅಸ್ವಸ್ಥೆಯಿಂದ ಬಳಲುತ್ತಿರು ವವರನ್ನು ಹೊರತು ಪಡಿಸಿ ಇತರರಿಗೆ,ಲಕ್ಷಣ ರಹಿತ ಗರ್ಭಿಣಿ ಹಾಗೂ ಇತರರ ಶಸ್ತ್ರಚಿಕಿತ್ಸೆ ವೇಳೆ, ಗೃಹ ಹಾಗೂ ಆಸ್ಪತ್ರೆ ಯಿಂದ ಬಿಡುಗಡೆಗೊಂಡ ರೋಗಿಗಳಿಗೆ ಕೋವಿಡ್ ಪರೀಕ್ಷೆ ಇಲ್ಲ ಎಂಬುದು ಮಾರ್ಗಸೂಚಿಯಲ್ಲಿದೆ. ಆದರೆ, ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಗಸೂಚಿ ಪಾಲಿಸುತ್ತಿಲ್ಲ .
ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಗೆ ಒಪಿಡಿ ಸೇವೆಗೆ ಬರುವ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಲಕ್ಷಣವಿಲ್ಲದವರಿಗೆ ಸೋಂಕು ದೃಢವಾದರೆ ಆರೋಗ್ಯದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಇಲ್ಲಿ ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವೇನೂ ಇಲ್ಲ.
–ಬಾಲಸುಂದರ್, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ