ಕೊರಟಗೆರೆ: ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಪಂನ ಥರಟಿ ಗ್ರಾಮದಲ್ಲಿ ಕೋವಿಡ್ ತಪಾಸಣೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಥರಟಿ ಗ್ರಾಮಕ್ಕೆತೆರಳಿದಾಗ ಅಲ್ಲಿನ ಸಾರ್ವಜನಿಕರು ಕೋವಿಡ್ ತಪಾಸಣೆಗೆ ಬಾರದೇ ಮನೆಗಳ ಬಾಗಿಲುಗಳನ್ನು ಹಾಕಿಕೊಂಡಿದ್ದಾರೆ.
45 ಮಂದಿ ತಪಾಸಣೆ: ನಂತರ ಗ್ರಾಪಂನ ಟಾಸ್ಕ್ ಫೋರ್ಸ್ ಕಮಿಟಿ ಹಾಗೂ ಕೊರಟಗೆರೆ ಎಎಸ್‌ಐ ಯೋಗೀಶ್ ಆಗಮಿಸಿ ಸಾರ್ವಜನಿಕರಿಗೆ ತಿಳಿ ಹೇಳಿ ತಪಾಸಣೆ ಮಾಡಲು ಮನವಿ ಮಾಡಿದ್ದಾರೆ. ಇವರಮಾತಿಗೆ ಸ್ಪಂದಿಸಿದ ಸಾರ್ವಜನಿಕರು ಸುಮಾರು 45 ಜನ ತಪಾಸಣೆ ಮಾಡಿಸಿಕೊಂಡಿದ್ದಾರೆ.
ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ: ಎಎಸ್‌ಐ ಯೋಗೀಶ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಗ್ರಾಮದ ಪ್ರಜ್ಞಾವಂತ ಯುವಕರು ತಮ್ಮ ಮನೆಗಳಲ್ಲಿರುವ ವೃದ್ಧರು, ಮಕ್ಕಳು, ಹಾಗೂ ಎಲ್ಲಾ ವಯಸ್ಸಿನವರು ಈ ಸಮಯದಲ್ಲಿ ಕೋವಿಡ್ 19 ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿ ಹೇಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಹಾಗೆಯೇ ಸರ್ಕಾರಿ ಸಾರ್ವಜನಿಕಆಸ್ಪತ್ರೆಗಳಲ್ಲಿಕೊರೊನಾಲಸಿಕೆಯನ್ನು ಹಾಕಲಾಗುತ್ತಿದ್ದು ತಪ್ಪದೇ ಲಸಿಕೆಯನ್ನು ಹಾಕಿಸಿ ಕೊಳ್ಳಿ ಎಂದು ತಿಳಿಸಿದರು.
ಭಯ ಬೇಡ: ಪಟ್ಟಣಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದೆ. ಥರಟಿ ಗ್ರಾಮದಲ್ಲಿ ಕೆಲವರು ಇಲ್ಲದ ಸುಳ್ಳುಗಳನ್ನು ಹಬ್ಬಿಸಿ ತಪಾಸಣೆ ಮಾಡಿಸಿಕೊಳ್ಳು ವವರಿಗೆ ಭಯ ಹುಟ್ಟಿಸುತ್ತಿದ್ದಾರೆ. ತಾಲೂಕಿನ ಅನೇಕ ಗ್ರಾಪಂಗಳು ಕೊರೊನಾ ಹಾಟ್‌ಸ್ಪಾಟ್ ಆಗಿದ್ದು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ದಾಕ್ಷಾಯಣಮ್ಮ, ನವೀನ್, ಪುಷ್ಪಾ ರವಿಕುಮಾರ್, ವೈದ್ಯರಾದ ಡಾ. ಹರ್ಷವರ್ಧನ್, ಪಿಡಿಒ ಮಂಜಮ್ಮ, ಅಂಗನ ವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ ಯರು, ಗ್ರಾಪಂ ಅಧಿಕಾರಿಗಳು, ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.