Advertisement

ಮನೆಮನೆಗೆ ತೆರಳಿ ಕೋವಿಡ್ ತಪಾಸಣೆ ನಡೆಸಿ

02:32 PM Jun 01, 2021 | Team Udayavani |

ಹೊಳೆನರಸೀಪುರ: ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಮನೆಮನೆಗೆ ತೆರಳಿ ಕೋವಿಡ್ ತಪಾಸಣೆ ನಡೆಸುವಂತೆ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

Advertisement

ತಾಲೂಕುಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಇಲ್ಲಿಯವರೆಗೆ ತಾಲೂಕಿನಲ್ಲಿ ಸುಮಾರು 1500 ಮಂದಿ ಸೋಂಕಿತರು ಪತ್ತೆಯಾಗಿದ್ದು ಅದರಲ್ಲಿ 600 ಮಂದಿ ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಶುಶ್ರೂಷೆ ಪಡೆಯತ್ತಿದ್ದಾರೆ. ಉಳಿದಂತೆ 900ಮಂದಿ ಗೃಹ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲೂಕಿನ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಲ್ಲಆರೋಗ್ಯ ಸಿಬ್ಬಂದಿಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕೋವಿಡ್ ತಪಾಸಣೆ ನಡೆಸಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರನ್ನು ಕೊರೊನಾ ಕೇರ್‌ ಸೆಂಟರ್‌ಗೆ ನೋಂದಾಯಿಸಬೇಕೆಂದು ಸಲಹೆ ನೀಡಿದರು.

ಪಟ್ಟಣದಲ್ಲಿ ನಾಳೆಯಿಂದ ಪುರಸಭೆ ಸಹಕಾರದೊಂದಿಗೆ ಎಲ್ಲ ವಾರ್ಡ್‌ಗಳಲ್ಲಿಯೂ ಮನೆ ಮನೆಗೆ ತೆರಳಿ ಕೊರೊನಾ ತಪಾಸಣೆ ನಡೆಸಲಾಗುವುದು ಎಂದರು. ಸಭೆಯಲ್ಲಿನೋಡಲ್‌ ಅಧಿಕಾರಿ ಮಹೇಶ್‌, ತಹಶೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ, ತಾಪಂ ಇಒ ಯೋಗೇಶ್‌,ಸಿಡಿಪಿಒಪ್ರ ಸನ್ನ,ಟಿಎಚ್‌ಒ ರಾಜೇಶ್‌, ಪಶುವೈದ್ಯ ತಿಪ್ಪೇಸ್ವಾಮಿ, ಬಿಸಿಎಂ ಅಧಿಕಾರಿ ಮಂಜುನಾಥ್‌, ಕಾರ್ಮಿಕ ಅಧಿಕಾರಿ ಮಂಗಳಗೌರಿ, ಪುರಸಭೆ ಮುಖ್ಯಾಧಿಕಾರಿ ಶಾಂತಲಾ ಸೇರಿದಂತೆ ತಾಲೂಕು ಮಟ್ಟದವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next