ಗುತ್ತಿಗಾರು: ನಾಲ್ಕೂರು ಗ್ರಾಮದ ಸಾಲ್ತಾಡಿಯಲ್ಲಿ ವೃದ್ಧ ದಂಪತಿಯ ಶಿಥಿಲಗೊಂಡ ಮನೆಯನ್ನು ಗುತ್ತಿಗಾರು ಗ್ರಾ.ಪಂ.ನ ಕೋವಿಡ್-19 ಕಾರ್ಯಪಡೆ ದುರಸ್ತಿಗೊಳಿಸಿದೆ.
ಸಾಲ್ತಾಡಿಯ ಸುಬ್ರಾಯ ಗೌಡ ಅವರಿಗೆ ವಯಸ್ಸಾಗಿದೆ. ಜತೆಗೆ ಅಸೌಖ್ಯವೂ ಇದೆ. ಪತ್ನಿ ಭಾಗೀರಥಿ ಕೂಲಿ ಕೆಲಸ ಮಾಡುತ್ತಿದ್ದು, ಅದರಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿ ಸಂಬಂಧಿಕರೋರ್ವರ ಮಗಳನ್ನು ದತ್ತು ಪುತ್ರಿಯಂತೆ ಸಾಕುತ್ತಿದ್ದು, ಆಕೆಗೂ ಆರೋಗ್ಯ ಸಮಸ್ಯೆ ಇದೆ.
ಈ ದಂಪತಿಯ ಮನೆಯ ಮಾಡು ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಗೆ ಬಂದಿತ್ತು. ಇದನ್ನು ಗಮನಿಸಿದ ಗುತ್ತಿಗಾರು ಗ್ರಾ.ಪಂ.ನ ಕೋವಿಡ್-19 ಕಾರ್ಯಪಡೆ ಪಂ. ಅಧ್ಯಕ್ಷ ಅಚ್ಯುತ ಗುತ್ತಿಗಾರು ನೇತೃತ್ವದಲ್ಲಿ ಮೇ 10ರಂದು ಮನೆ ದುರಸ್ತಿ ಪೂರ್ಣಗೊಳಿಸಲಾಯಿತು.
ಕಾರ್ಯಪಡೆಯ ರಾಕೇಶ್ ಮೆಟ್ಟಿನಡ್ಕ ಲೋಕೇಶ್ವರ ಡಿ.ಆರ್., ಮಹೇಶ್ ಸಾಲ್ತಾಡಿ, ವಿನಯ ಸಾಲ್ತಾಡಿ, ಕೇಶವ ಕಾಂತಿಲ, ಶೂರಪ್ಪ ಕಮಿಲ, ರಾಧಾಕೃಷ್ಣ ತುಪ್ಪದ ಮನೆ, ರತ್ನಾಕರ ಪೈಕ, ಲೋಕೇಶ್ ಪೈಕ, ಕಿಶೋರ್‌ಕುಮಾರ್ ಪಿ.ಆರ್., ಚಂದ್ರಶೇಖರ ಪಾರೆಪ್ಪಾಡಿ, ಬಾಲಕೃಷ್ಣ ಉಜಿರಡ್ಕ, ಜಯರಾಮ ಪೈಕ, ಸ್ಥಳೀಯರಾದ ರವೀಂದ್ರ ಪೂಜಾರಿಕೋಡಿ, ಸತೀಶ್ ಬೊಂಬು, ಉಮೇಶ್ ಆಚಾರ್ಯ ಕೋಣೆಕಾನ, ಜಗದೀಶ್ ಪೈಕ, ಮನೋಜ್ ಸಾಲ್ತಾಡಿ, ಕಮಲಾಕ್ಷ ಪೂಜಾರಿಕೋಡಿ ಕೈ ಜೋಡಿಸಿದರು.
ಸೋಮನಾಥ ಸಾಲ್ತಾಡಿ, ಮನೆಯ ವರು ಉಟೋಪಚಾರದ ವ್ಯವಸ್ಥೆ ಮಾಡಿದರು. ಸದ್ಯ ಈ ಕುಟುಂಬಕ್ಕೆ ಗ್ರಾ.ಪಂ. ವತಿಯಿಂದ ದಿನಸಿ ಕಿಟ್ ಪೂರೈಸಲಾಗಿದೆ. ಪಡಿತರ ವಿತರಣೆಗೂ ಅವಕಾಶ ಕಲ್ಪಿಸಿದೆ.