Advertisement
ನಿನ್ನೆ ಯೋಗರಾಜ್ ಭಟ್ ಅವರು ಪಂಚಾಯ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸ್ಪರ್ಧಿಗಳಿಗೆ ವ್ಯಕ್ತಿತ್ವದ ಪಾಠವನ್ನು ಮಾಡಿದ್ದಾರೆ. ಸ್ಪರ್ಧಿಗಳ ಮೇಲೆ ಬಂದಿರುವ ಆರೋಪಗಳನ್ನು ಓದಿ ಅವರ ಬಾಯಿಯಿಂದಲೇ ತಮ್ಮ ತಪ್ಪುಗಳ ಬಗ್ಗೆ ಮಾತನಾಡಿಸಿದ್ದಾರೆ.
Related Articles
Advertisement
ಸುದೀಪ್ ಅವರ ತಾಯಿಯ ನಿಧನದ ಸುದ್ದಿಯನ್ನು ಯೋಗರಾಜ್ ಭಟ್ ಅವರು ಬಿಗ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಎಷ್ಟೇ ಕಷ್ಟ ಬಂದರೂ ಜವಾಬ್ದಾರಿ ಬಿಡದೆ ಅವರು ಶೋ ನಡೆಸಿಕೊಟ್ಟಿದ್ದಾರೆ ಎಂದು ಮನೆಯವರಿಗೆ ತಿಳಿಸಿದ್ದಾರೆ.
ಹೋಗಬೇಕು ಹೋಗಬೇಕು ಅಂಥ ಇದ್ರು, ಕಾರ್ಯಕ್ರಮವನ್ನು ಮುಗಿಸಿಯೇ ಅವರು ಮನೆಗೆ ಹೋಗಿ, ಆಸ್ಪತ್ರೆಗೆ ಹೋಗಿದ್ದರು. ಆದರೆ ಅಷ್ಟೋತ್ತಿಗೆ ಅವರು ಈ ಜಗತ್ತಿನಲ್ಲಿ ಇರಲಿಲ್ಲ ಎಂದಿದ್ದಾರೆ.ಈ ಮಾತನ್ನು ಕೇಳಿದ ಮನೆಯವರು ಕಣ್ಣೀರಿಟ್ಟಿದ್ದಾರೆ. ಎಲ್ಲರೂ ಒಂದು ನಿಮಿಷ ಮೌನಾಚರಣೆ ಸಲ್ಲಿಸಿದ್ದಾರೆ. ಬಿಗ್ ಬಾಸ್ ಮನೆಗೆ ಸೃಜನ್ ಎಂಟ್ರಿ..
ಸುದೀಪ್ ಅನುಪಸ್ಥಿತಿಯಲ್ಲಿ ಭಾನುವಾರದ ಸಂಚಿಕೆ ನಡೆಸಲು ಸೃಜನ್ ಲೋಕೇಶ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಆಯಾ ಸ್ಪರ್ಧಿಗಳನ್ನು ಕರೆದು ಇತರೆ ಸ್ಪರ್ಧಿಗಳನ್ನು ಪರಿಚಯ ಮಾಡಲು ಹೇಳಿದ್ದಾರೆ. ಬಿಗ್ ಬಾಸ್ ಅನ್ನೋದು ಒಂದು ಆಟ ಮಾತ್ರವಲ್ಲ, ನೀವು ಹೇಗೆ ವರ್ತಿಸುತ್ತೀರಿ ಅನ್ನೋದು ಬಿಗ್ ಬಾಸ್. ಜನ ಇದನ್ನು ನೋಡುತ್ತಿರುತ್ತಾರೆ ಎಂದು ಸೃಜನ್ ಕಿವಿ ಮಾತನ್ನು ಹೇಳಿದ್ದಾರೆ. ನಾಮಿನೇಟ್ ಪಾರಾದವರು ಯಾರೆಲ್ಲ..?
ನಾಮಿನೇಟ್ ಆದ 9 ಜನರ ಪೈಕಿ ಮೊದಲು ಭವ್ಯ, ಸುರೇಶ್ ಅವರು ಎಲಿಮಿನೇಷನ್ ನಿಂದ ಪಾರಾಗಿದ್ದಾರೆ. ಆ ಬಳಿಕ ಲಡ್ಡು ತಿನ್ನುವ ಟಾಸ್ಕ್ ಆಡಿ ಶಿಶಿರ್ ಹಾಗೂ ಚೈತ್ರಾ ಸೇವ್ ಆಗಿದ್ದಾರೆ. ‘ಟನ್ ಟನಾ ಟನ್’ ಹಾಗೂ ಬಲೂನ್ ಒಡೆಯುವ ಚಟುವಟಿಕೆಯನ್ನು ಆಡಿ ಮಂಜು, ಗೌತಮಿ ಅವರು ಸೇವ್ ಆಗಿದ್ದಾರೆ. ಇದಾದ ಬಳಿಕ ಮಾನಸ ಅವರು ಸೇವ್ ಆಗಿದ್ದಾರೆ. ಭವ್ಯಾ, ಶಿಶಿರ್, ತಿವಿಕ್ರಮ್ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ಮೋಕ್ಷಿತಾ ಆರೋಪಿಸಿದ್ದಾರೆ. ಮನೆಯಿಂದ ಆಚೆ ಹೋದವರು ಯಾರು..?
9 ಮಂದಿಯಲ್ಲಿ ಕೊನೆಯದಾಗಿ ಹಂಸ ಹಾಗೂ ಮೋಕ್ಷಿತಾ ಅವರು ಉಳಿದಿದ್ದು, ಬಿಗ್ ಬಾಸ್ ಮನೆಗೆ ಬಂದ ಎರಡು ಕಾರುಗಳಲ್ಲಿ ಇಬ್ಬರು ಕೂತಿದ್ದಾರೆ. ಕಾರುಗಳು ಬಿಗ್ ಬಾಸ್ ಮನೆಯ ಅಂಗಳದಲ್ಲಿ ಎರಡು ಮೂರು ರೌಂಡ್ ಸುತ್ತಿ ಆ ಬಳಿಕ ಹಂಸ ಅವರಿದ್ದ ಕಾರು ಮನೆಯಿಂದ ಹೊರ ಹೋಗಿದ್ದಾರೆ. ಆ ಮೂಲಕ ಹಂಸ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಆದರೆ ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಸೋಮವಾರ ಪ್ರಸಾರ ಮಾಡಲಾಗುತ್ತದೆ. ಹಂಸ ಅವರು ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಅವರು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ಒಂದಷ್ಟು ನಿರ್ಧಾರಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಜಗದೀಶ್ ಅವರೊಂದಿಗೆ ಕೆಲ ಸಮಯ ಆತ್ಮೀಯವಾಗಿದ್ದರು. ಜಗದೀಶ್ ಅವರು ಹಂಸ ಮೇಲೆ ಅವಹೇಳನಕಾರಿ ಪದ ಬಳಸಿದಾಗ ಹಂಸ ಆಕ್ರೋಶ ವ್ಯಕ್ತಪಡಿಸಿದ್ದರು. ಹಂಸ ಅವರು ಮುಂದಿನ ವಾರಕ್ಕೆ ನೇರವಾಗಿ ಹನುಮಂತು ಅವರನ್ನು ನಾಮಿನೇಟ್ ಮಾಡಿದ್ದಾರೆ.