Advertisement

ಗಾಳಿಯಲ್ಲೂ ಬಹುದೂರ ಪ್ರಯಾಣಿಸುವ ಕೋವಿಡ್ !

01:09 AM May 27, 2021 | Team Udayavani |

ಹೊಸದಿಲ್ಲಿ : ದೇಶದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿ ಎರಡು-ಮೂರು ತಿಂಗಳುಗಳು ಕಳೆಯುವಷ್ಟರಲ್ಲಿ ಕೊರೊನಾ ವೈರಾಣು ಹಲವಾರು ಬಾರಿ ರೂಪಾಂತರಗೊಂಡಿದ್ದು, ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೊರೊನಾ ನಿರ್ವಹಣೆಯ ಮಾರ್ಗ ಸೂಚಿ ಗಳನ್ನು ಕೇಂದ್ರ ಆರೋಗ್ಯ ಇಲಾಖೆ ಪರಿಷ್ಕರಿಸಿದೆ.

Advertisement

ಹೊಸ ವಿಚಾರಗಳು
ಸೋಂಕಿತನ ಎಂಜಲು, ಮೂಗಿನ ಮ್ಯೂಕಸ್‌ ದ್ರವದಿಂದ ಕೊರೊನಾ ಹರಡುತ್ತದೆ. ಮಾತನಾಡುವಾಗ ಹೊರ ಬೀಳುವ ಎಂಜಲಿನ ಸಣ್ಣ ಹನಿಗಳಲ್ಲೂ ವೈರಸ್‌ ಗಳು ಇದ್ದು, ವಾತಾವರಣದಲ್ಲಿ ಸೇರಿಕೊಳ್ಳುತ್ತವೆ. ಒಮ್ಮೆ ಗಾಳಿಯನ್ನು ಸೇರಿದರೆ ಸಾಕಷ್ಟು ದೂರ ಪ್ರಯಾಣ ಮಾಡಬಲ್ಲವು. ಯಾವುದೇ ವಸ್ತುಗಳ ಮೇಲೆ ಇವು ಬಿದ್ದರೆ, ಅಲ್ಲಿಯೇ ಬಹುದಿನಗಳವರೆಗೆ ಇರಬಲ್ಲವು.

ಎಂಜಲು ಹನಿಗಳಿಂದ ಬರುವ ವೈರಾಣುಗಳು ನೆಲಕ್ಕೆ ಬಿದ್ದ ಮೇಲೆ 2 ಮೀ. ದೂರಕ್ಕೆ ಹರಡಬಲ್ಲವು. ಕೆಮ್ಮು, ಉಸಿರಾಟದಿಂದ ಬರುವ ವೈರಾಣುಗಳು ಗಾಳಿಯಲ್ಲಿ 10 ಮೀ. ವರೆಗೆ ಸಾಗಬಲ್ಲವು ಎಂದು ಹೇಳಲಾಗಿದೆ.

ಪರಿಷ್ಕೃತ ನಿಯಮಗಳು
– ಯಾವಾಗಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ.
– ಕೊರೊನಾ ಹರಡುವಿಕೆಗೆ ಕಡ್ಡಾಯ ತಡೆ ಹಾಕಲೇಬೇಕು.
– ಸಾಮಾಜಿಕ ಅಂತರ ಮತ್ತಷ್ಟು ಬಿಗಿಗೊಳ್ಳಬೇಕು.
– ನೈರ್ಮಲ್ಯ ಹಾಗೂ ಮುಕ್ತ ಗಾಳಿ ಸಂಚಾರಕ್ಕೆ ಎಲ್ಲೆಡೆ ಅನುವು ಮಾಡಿಕೊಡಬೇಕು.
– ಯಾರೂ ಕೂಡ ಸಾರ್ವಜನಿಕ ಜಾಗಗಳಲ್ಲಿ ಉಗುಳುವುದು, ಸಿಂಬಳ ಇತ್ಯಾದಿಯನ್ನು ಎಸೆ ಯುವುದು ಮಾಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next