Advertisement

ಕೋವಿಡ್ ಸೋಂಕಿನಿಂದ ಹೃದಯಕ್ಕೆ ಹಾನಿ! ಅಧ್ಯಯನ ವರದಿಗಳು ಸಾರುತ್ತಿವೆ ಅಪಾಯ

09:08 PM Nov 01, 2020 | sudhir |

ವಾಷಿಂಗ್ಟನ್‌: ಕೋವಿಡ್‌-19 ಅನ್ನು ಶ್ವಾಸಕೋಶಕ್ಕೆ ಹಾನಿಕರವಾದ ವೈರಸ್‌ ಎನ್ನಲಾಗುತ್ತದಾದರೂ, ಈ ವೈರಾಣು ನೇರವಾಗಿ ಮತ್ತು ಪರೋಕ್ಷವಾಗಿ ಹೃದಯಕ್ಕೆ ಹಾನಿಮಾಡುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

Advertisement

ಇತ್ತೀಚಿನ ಅಧ್ಯಯನಗಳ ಪ್ರಕಾರ ಕೋವಿಡ್‌-19 ಕೆಲವರ ಶ್ವಾಸಕೋಶದ ಸಾಮರ್ಥ್ಯವನ್ನು ತಗ್ಗಿಸಿಬಿಡುತ್ತದೆ. ಇದರಿಂದಾಗಿ ಹೃದಯಕ್ಕೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ದೊರೆಯದೇ ತೊಂದರೆಯಾಗಬಹುದು. ಇನ್ನು ದೇಹವು ಸಾಂಕ್ರಾಮಿಕದ ವಿರುದ್ಧ ಹೋರಾಡುವ ಪ್ರಕ್ರಿಯೆಯ ವೇಳೆಯಲ್ಲೂ ಹೃದಯಕ್ಕೆ ತೊಂದರೆ ಆಗಬಹುದು. ಇಲ್ಲವೇ ವೈರಸ್‌ ರಕ್ತನಾಳಗಳನ್ನು ಪ್ರವೇಶಿಸಿ, ಅಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.

ಹೀಗಾದಾಗ, ರಕ್ತ ಹೆಪ್ಪುಗಟ್ಟಿ ಹೃದಯಾಘಾತವೂ ಉಂಟಾಗಬಹುದು ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಷಿಕಾಗೋದ ಡಾ. ಸೀನ್‌ ಪಿನ್ನೆ. ಅಮೆರಿಕನ್‌ ಕಾಲೇಜ್‌ ಆಫ್ ಕಾರ್ಡಿಯಾಲಜಿಯ ಹೃದ್ರೋಗತಜ್ಞ ಟಾಮ್‌ ಮ್ಯಾಡಾಕ್ಸ್‌, ಹೃದ್ರೋಗದ ಸಮಸ್ಯೆ ಇರುವವರು ಈ ಹೊತ್ತಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ:ಪ್ರತಿಯೊಬ್ಬ ಕನ್ನಡಿಗರು ಕೂ ಆ್ಯಪ್ ಬಳಸುವ ಮೂಲಕ ಕನ್ನಡವನ್ನು ಬೆಳೆಸಲಿ : ಬಿಎಸ್ ವೈ

Advertisement

Udayavani is now on Telegram. Click here to join our channel and stay updated with the latest news.

Next