ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ವಹಿವಾಟು ಅಲ್ಪ ಏರಿಕೆಯೊಂದಿಗೆ ಮುಕ್ತಾಯ ಕಂಡಿದೆ.
ಇದನ್ನೂ ಓದಿ:ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿತಂದು ನೆನಪುಗಳನ್ನು ಬೆಸೆಯುವ ಕೊಂಡಿ ಆಟೋಗ್ರಾಫ್
ಶುಕ್ರವಾರ(ಏಪ್ರಿಲ್ 16) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 28.35 ಅಂಕಗಳ ಏರಿಕೆಯೊಂದಿಗೆ 48,832.03 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 36.40 ಅಂಕಗಳ ಏರಿಕೆಯೊಂದಿಗೆ 14,617.85ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆ ಪರಿಣಾಮ ಏಷ್ಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್, ಒಎನ್ ಜಿಸಿ, ಸನ್ ಫಾರ್ಮಾ, ಎಚ್ ಸಿಎಲ್ ಟೆಕ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಲಾಭ ಗಳಿಸಿವೆ. ಏತನ್ಮಧ್ಯೆ ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿವೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಏರುತ್ತಿದ್ದು, ಈಗಾಗಲೇ ದಿನಂಪ್ರತಿ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಈ ಸ್ಥಿತಿ ಮುಂದುವರಿದಲ್ಲಿ ಹೂಡಿಕೆದಾರರು, ಖರೀದಿದಾರರು ಹಿಂದೇಟು ಹಾಕುವ ಮೂಲಕ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಸ್ಟ್ರೆಟಜಿ ಹೆಡ್ ಬಿನೋದ್ ಮೋದಿ ತಿಳಿಸಿದ್ದಾರೆ.