ಮಣಿಪಾಲ: ದಕ್ಷಿಣ ಕೊರಿಯಾ ಮೂಲದ 28 ವರ್ಷದ ಮಹಿಳೆಗೆ ವಿಮಾನ ಪ್ರಯಾಣದ ಸಂದರ್ಭ ಕೋವಿಡ್ ಕಾಣಿಸಿಕೊಂಡಿದೆ. ವಿಮಾನದಲ್ಲಿ ಪ್ರಯಾಣ ಮಾಡಿದ 8 ದಿನಗಳ ಬಳಿಕ ಇದು ಪತ್ತೆಯಾಗಿದೆ. ಪ್ರಯಾಣದ ಸಂದರ್ಭ ಸೋಂಕು ಹರಡಲು ವಿಮಾನದಲ್ಲಿನ ಶೌಚಾಲಯ ಕಾರಣ ಎಂದು ಹೇಳಲಾಗುತ್ತಿದೆ.
ಕೋವಿಡ್ 19 ಸೋಂಕಿತ ಬಳಸಿದ ಶೌಚಾಲಯಗಳನ್ನು ಇತರರು ಬಳಸಿದರೆ ಸೋಂಕು ಹರಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಈ ಮಹಿಳೆ ಪ್ರಯಾಣಿಸಿದ ವಿಮಾನದಲ್ಲಿ ಒಟ್ಟು 300 ಪ್ರಯಾಣಿಕರಿದ್ದರು.
ಸಿಯೋಲ್‌ನ ಸೀಚುನ್ನಾ ಆ್ಯಂಗ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಇಡೀ ಪ್ರಯಾಣದ ಸಂದರ್ಭ ಮಹಿಳೆ ಎನ್ -95 ಮಾಸ್ಕ್ ಧರಿಸಿದ್ದರು. ಆದರೆ ಶೌಚಾಲಯದಲ್ಲಿ ವೈರಸ್ ಹರಡಿರುವ ಸಾಧ್ಯತೇ ಹೆಚ್ಚು ಎಂದು ಹೇಳಲಾಗುತ್ತದೆ.
ವೈರಸ್ ಲಕ್ಷಣ ರಹಿತವಾಗಿದ್ದು ಕಾರಣ :
ಪ್ರಯಾಣದ ಸಮಯದಲ್ಲಿ ಶೌಚಾಲಯವನ್ನು ಬಳಸಿದ ಪ್ರಯಾಣಿಕರು ಯಾವುದೇ ಸೋಂಕಿಗೆ ಒಳಗಾಗಿರಲಿಲ್ಲ. ವಿಮಾನ ಹತ್ತುವ ಮೊದಲು ಎಲ್ಲ ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಗುತ್ತದೆ. ಆದರೆ ಮೂಲಗಳ ಪ್ರಕಾರ ಕೋವಿಡ್ ಸೋಂಕು ತಗುಲಿದ್ದೂ ಗುಣಲಕ್ಷಣ ರಹಿತವಾಗಿದ್ದರಿಂದ ಇದು ಸಂಭವಿಸಿದೆ ಎಂದು ಹೇಳಲಾಗುತ್ತದೆ.