Advertisement

ನಿಯಮ ಪಾಲಿಸದವರಿಗೆ 250 ರೂ. ದಂಡ

02:42 PM Apr 07, 2021 | Team Udayavani |

ತುಮಕೂರು: ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್‌ ಬಳಸುವುದು ಕಡ್ಡಾಯವಾಗಿದೆ. ಇದರ ಉಲ್ಲಂಘನೆಮಾಡಿದವರಿಗೆ ಕಾನೂನು ರೀತಿ ಪಾಲಿಕೆ ವ್ಯಾಪ್ತಿಯಲ್ಲಿ250. ರೂ.ಗಳು ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಎಚ್ಚರಿಕೆ ನೀಡಿದರು.

Advertisement

ತುಮಕೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಸಂಯುಕ್ತವಾಗಿ ಮಂಗಳವಾರಹಮ್ಮಿಕೊಂಡಿದ್ದ ಕೋವಿಡ್‌ ತಪಾಸಣೆ ಮತ್ತು ಸ್ವ್ಯಾಬ್‌ ಸಂಗ್ರಹ ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಎರಡನೇ ಹಂತದ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿಸಾರ್ವಜನಿಕರು ಜಾಗೃತವಾಗಿ ಇರುವುದು ಮುಖ್ಯ.ಎಲ್ಲರೂ ಮನೆಯಲ್ಲಿ ಇದ್ದು ಸಹಕರಿಸಬೇಕು. ಅನಗತ್ಯಸಭೆ, ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಸಬೇಕು ಎಂದು ಸೂಚಿಸಿದರು.

ನಗರದಲ್ಲಿ ಪಾಸಿಟಿವ್‌ ಕೇಸ್‌ಗಳು ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಟೆಸ್ಟ್‌ ಸಂಖ್ಯೆ ಕಡಿಮೆಯಾಗುತ್ತಿದೆ.ಆದ್ದರಿಂದ ವಾರ್ಡ್‌ ಹಂತದಲ್ಲಿ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮೊಬೈಲ್‌ ಆರೋಗ್ಯ ವಾಹನದ ಮೂಲಕ ತಪಾಸಣೆ ಕೈಗೊಳ್ಳಲಾಗಿದೆ ಎಂದರು. ಕೋವಿಡ್‌ ಸೋಂಕಿತರ ಜೊತೆ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದವರು ತಾವಾಗಿಯೇಮಾಹಿತಿ ನೀಡಬೇಕು. ಅಂತಹವರಿಗೆ ವಾರ್ಡ್‌  ನಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. 45ವರ್ಷ ಮೇಲ್ಪಟ್ಟ ನಾಗರಿಕರುಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಲಸಿಕೆಯನ್ನ ಪ್ರಾಥಮಿಕಆರೋಗ್ಯ ಕೇಂದ್ರದಲ್ಲಿ ಹಾಕಿಸಿಕೊಳ್ಳಬೇಕು. 28 ದಿನಗಳ ನಂತರ ದ್ವೀತಿಯ ಹಂತದ ಲಸಿಕೆಯನ್ನು ಪಡೆಯಬಹುದು ಎಂದರು.

ಮೊಬೈಲ್ ಸ್ಕ್ವಾಡ್ ಸಮಿತಿ ರಚನೆ: ಪಾಲಿಕೆ ವ್ಯಾಪ್ತಿ  ಯಲ್ಲಿ ಪರವಾನಗಿ ಪಡೆಯದೇ ಸಭೆ, ಸಮಾರಂಭ ನಡೆದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಂಡು 5 ರಿಂದ 10 ಸಾವಿರ ರೂ.ಗಳ ವರೆಗೆ ದಂಡವಿಧಿಸಲಾಗುವುದು. ಇದಕ್ಕೆಂದೆ ವಿಶೇಷವಾಗಿ 4 ಮೊಬೈಲ್‌ ಸ್ಕ್ವಾಡ್‌ ಸಮಿತಿಗಳನ್ನ ರಚಿಸಲಾಗಿದೆ. ಇವರು ಬೆಳಗ್ಗೆ 6 ರಿಂದ ಸಂಜೆ 6ರ ವರಗೆ ಪಾಲಿಕೆ ವ್ಯಾಪ್ತಿ ಯಲ್ಲಿಸಂಚರಿಸಲಿದ್ದಾರೆ.  ಮಾಸ್ಕ್ ಧರಿಸದವ ರನ್ನು ಗುರುತಿಸಿದಂಡ ವಿಧಿಸುತ್ತಾರೆ. ಅದಕ್ಕಾಗಿ ಸಾರ್ವಜನಿಕರಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರ ಆರೋಗ್ಯಾಧಿಕಾರಿ ಡಾ. ಮೋಹನ್‌ ಮಾತನಾಡಿ, ನಗರ ಪ್ರದೇಶದಲ್ಲಿ ಪಾಸಿಟಿವ್‌ ಕೇಸ್‌ ಹೆಚ್ಚಾಗುತ್ತಿರುವ ಕಾರಣ ವಾರ್ಡ್‌ ಹಂತದಲ್ಲಿ ಅರಿವುಮೂಡಿಸುವುದು ಅಗತ್ಯ. 24ನೇ ವಾರ್ಡ್‌ನಲ್ಲಿ ವಿದ್ಯುಕ್ತವಾಗಿ ಸ್ವಾಬ್‌ ಕಲೆಕ್ಷನ್‌ ಪ್ರಕ್ರಿಯೆ ಆರಂಭವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದವರ ಸ್ವಾ$Âಬ್‌ ಕಲೆಕ್ಷನ್‌ ಮಾಡಲಾಗುತ್ತಿದೆ. ಜೊತೆಗೆ ಬಿಪಿ, ಶುಗರ್‌ ಸೇರಿದಂತೆ ಇನ್ನೀತರ ದೀರ್ಘ‌ ಕಾಯಿಲೆಗಳನ್ನು ಪತ್ತೆ ಮಾಡಲಾಗುತ್ತಿದೆ. ಅಂತಹವರಿಂದಲೂ ಸ್ವಾ$Âಬ್‌

Advertisement

ಕಲೆಕ್ಷನ್‌ ಮಾಡಲಾಗುವುದು. ವಾರ್ಡ್‌ನಲ್ಲಿ 45ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಲು ತೊಂದರೆಯಾಗದಂತೆ ವಾಸವಿಶಾಲೆಯಲ್ಲಿ ವಾಕ್ಸಿನೇಷನ್‌ ನೀಡಲು ಸಿದ್ಧತೆ ಮಾಡಲಾಗಿದೆ. ಸಾರ್ವಜನಿಕರು ಇದರ ಉಪಯೋಗಪಡೆದುಕೊಳ್ಳಬೇಕು ಎಂದರು. ನಗರ ಪಾಲಿಕೆಯ ಮಹಾಪೌರ ಬಿ.ಜಿ. ಕೃಷ್ಣಪ್ಪ, ಪಾಲಿಕೆ ಸದಸ್ಯ ಎಚ್‌. ಮಲ್ಲಿಕಾರ್ಜುನ್‌ ಸೇರಿದಂತೆ ಪಾಲಿಕೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದನ್ನುತಡೆಯಲು ಸಾರ್ವಜನಿಕರ ಸಹಕಾರಅತಿಮುಖ್ಯ. ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕು. ಮಾಸ್ಕ್ ಹಾಕುವುದು ಕಡ್ಡಾಯ. ಮಾಸ್ಕ್ ಹಾಕದೇ ಇದ್ದವರಿಗೆ ದಂಡ ವಿಧಿಸಲಾಗುತ್ತದೆ.   ರೇಣುಕಾ, ಪಾಲಿಕೆ ಆಯುಕ್ತೆ

ತುಮಕೂರು ನಗರದ 24ನೇ ವಾರ್ಡ್‌ನಲ್ಲಿ ವಿದ್ಯುಕ್ತವಾಗಿ ಸ್ವ್ಯಾಬ್‌ ಕಲೆಕ್ಷನ್‌ ಪ್ರಕ್ರಿಯೆ ಆರಂಭವಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ. ಸೋಂಕಿತರ ಪ್ರಾಥಮಿಕ,ಹಾಗೂ ದ್ವೀತಿಯ ಸಂಪರ್ಕದವರ ಸ್ವ್ಯಾಬ್‌ ‌ ಕಲೆಕ್ಷನ್‌ ಮಾಡಲಾಗುತ್ತಿದೆ. ಯಾರೂಭಯಪಡದೇ ಕೋವಿಡ್ ಪರೀಕ್ಷೆಮಾಡಿಸಿಕೊಳ್ಳಿ, 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಿರಿ.   ಡಾ.ಮೋಹನ್, ನಗರ ಆರೊಗ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next