Advertisement

2ನೇ ದಿನವೂ ಲಭ್ಯವಾಗದ ಕೋವಿಡ್‌ ಫ‌ಲಿತಾಂಶ

05:33 AM Jun 30, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌ ಪ್ರಯೋಗಾಲಯ ಸೀಲ್‌ಡೌನ್‌ ಆಗಿರುವುದರಿಂದ ಜಿಲ್ಲೆಯ ಕೋವಿಡ್‌ ಪರೀಕ್ಷಾ ಫ‌ಲಿತಾಂಶ ಎರಡನೇ ದಿನ ಸೋಮವಾರವೂ ಲಭ್ಯವಾಗಲಿಲ್ಲ. ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್‌ ಪ್ರಯೋಗಾಲಯ ತೆರೆಯಲಾಗಿದ್ದು, ಕೋವಿಡ್‌ ಪರೀಕ್ಷೆ ನಡೆಸುವ ಪ್ರಯೋಗಾಲಯ ತಂತ್ರಜ್ಞೆಗೆ ಸೋಂಕು ತಗುಲಿದೆ.

Advertisement

ಕಳೆದ ಶನಿವಾರದಿಂದ ಕೋವಿಡ್‌ ಪ್ರಯೋಗಾಲಯವನ್ನು ಸೀಲ್‌ಡೌನ್‌ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ  ಸೋಮವಾರದವರೆಗೆ ನಡೆಸಿರುವ ಕೋವಿಡ್‌ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷಾ ಫ‌ಲಿತಾಂಶ ದೊರೆತಿಲ್ಲ. ನಗರದ ಪ್ರಯೋಗಾಲಯ ಸೀಲ್‌ಡೌನ್‌ ಆಗಿರುವುದರಿಂದ ಭಾನುವಾರ ರಾತ್ರಿ ಮಾದರಿಗಳನ್ನು ಬೆಂಗಳೂರಿಗೆ  ಕಳುಹಿಸಿಕೊಡಲಾಗಿದೆ.

ಇದರ ವರದಿ ಮಂಗಳವಾರ ಬರುವ ನಿರೀಕ್ಷೆಯಿದೆ. ಶನಿವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 33 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಓರ್ವ ಗುಣಮುಖ ನಾಗಿದ್ದಾನೆ. 32 ಸಕ್ರಿಯ ಪ್ರಕರಣಗಳಿವೆ.  ಶನಿವಾರದಿಂದ ಲ್ಯಾಬ್‌ ಫ‌ಲಿತಾಂಶ ಲಭ್ಯವಾಗದ ಕಾರಣ ಎರಡು ದಿನದ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಫ‌ಲಿತಾಂಶ ಬಂದರೆ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next