ಕಠ್ಮಂಡು: ಜಗತ್ತನ್ನೇ ಅಲ್ಲೋಲ ಕಲ್ಲೋಲವಾಗಿಸಿರುವ ಕೊರೊನಾ ಸೋಂಕು ಈಗ ಜಗತ್ತಿನ ಅತಿ ಎತ್ತರದ ಮೌಂಟ್ ಎವರೆಸ್ಟ್‌ಗೂ ತಲುಪಿದೆ.
ಎವರೆಸ್ಟ್ ಶಿಖರವೇರುತ್ತಿದ್ದ ನಾರ್ವೆಯ ಪರ್ವತಾರೋಹಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಪ್ರಸಕ್ತ ವರ್ಷ ಹೆಚ್ಚು ಹೆಚ್ಚು ಪರ್ವತಾರೋಹಿಗಳನ್ನು ಎವರೆಸ್ಟ್‌ನತ್ತ ಆಕರ್ಷಿಸಲು ಯೋಜನೆ ರೂಪಿಸಿದ್ದ ನೇಪಾಳಕ್ಕೆ ಈ ಬೆಳವಣಿಗೆ ಆಘಾತ ತಂದಿದೆ.
ಪರ್ವತಾರೋಹಿ ಎರ್ಲೆಂಡ್ ನೆಸ್ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬೇಸ್ ಕ್ಯಾಂಪ್‌ನಿಂದ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ತಂಡದಲ್ಲಿದ್ದ ಶೆರ್ಪಾವೊಬ್ಬರಿಗೂ ಸೋಂಕು ತಗುಲಿರುವುದಾಗಿ ನಾರ್ವೆ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ :ಸರಕಾರಿ ಬಸ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸಾವು, ಮಹಿಳೆಗೆ ಗಂಭೀರ ಗಾಯ
“ಶಿಖರದಲ್ಲಿ ಇನ್ಯಾರಿಗೂ ಸೋಂಕು ತಗುಲದಿರಲಿ ಎಂದು ನಾನು ಆಶಿಸುತ್ತೇನೆ. ಏಕೆಂದರೆ, 8 ಸಾವಿರ ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿದ್ದರೆ ಅವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲೂ ಸಾಧ್ಯವಿಲ್ಲ’ ಎಂದಿದ್ದಾರೆ ಎರ್ಲೆಂಡ್ ನೆಸ್.