Advertisement
ಜಿಲ್ಲಾಸ್ಪತ್ರೆಯಲ್ಲಿ 1,300 ಕೆಎಲ್ ಆಕ್ಸಿಜನ್ ಉತ್ಪಾದಕ ಘಟಕ ಸಿದ್ಧವಾಗಿದೆ. 125 ಬೆಡ್‌ಗಳಲ್ಲಿ 110 ಬೆಡ್‌ಗಳನ್ನು ಆಕ್ಸಿಜನ್ ಬೆಡ್‌ಗಳಾಗಿ ಪರಿವರ್ತಿಸಲಾಗಿದೆ. 3ನೇ ಅಲೆ ತಡೆಗೆ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ ಎಂದು ಶಾಸಕ ರಘುಪತಿ ಭಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ಮೋದಿಯವರ ದೂರದರ್ಶಿತ್ವದಿಂದ ದೇಶದಾದ್ಯಂತ 70.83 ಕೋಟಿ ಜನತೆಗೆ ಕೋವಿಡ್ ಮೊದಲ ಡೋಸ್ ಹಾಗೂ 29.17 ಕೋಟಿ ಜನತೆಗೆ ಎರಡನೇ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಮಿಷನ್ ಕೋವಿಡ್ ಸುರಕ್ಷಾ ಮೂಲಕ 900 ಕೋ.ರೂ.ವೆಚ್ಚದಲ್ಲಿ ಸಂಶೋಧನೆ ನಡೆಸಿ, ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಶೇ. 94 ಮಂದಿಗೆ ಆರೋಗ್ಯ ಇಲಾಖೆ ಮೂಲಕ ಲಸಿಕೆ ನೀಡಲಾಗಿದೆ. ಶೇ. 6ರಷ್ಟು ಮಂದಿ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಉಪಸ್ಥಿತರಿದ್ದರು.
Related Articles
Advertisement
ಕ್ವಾರಂಟೈನ್‌ನಲ್ಲಿ ವಿಪಕ್ಷ!ಲಸಿಕಾ ಅಭಿಯಾನಕ್ಕೆ ಕಾಂಗ್ರೆಸ್ ಸಹಿತ ವಿಪಕ್ಷಗಳು ನಿರಂತರ ತಡೆ ಯೊಡ್ಡುವ ಕಾರ್ಯ ಮಾಡಿವೆ. ಪೂರ್ಣ ಕ್ವಾರಂಟೈನ್‌ನಲ್ಲಿದ್ದ ವಿಪಕ್ಷಗಳು ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಟೀಕೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ ಪ್ರಧಾನಿ ಮೋದಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿದ್ದರಿಂದ 100 ಕೋಟಿ ಲಸಿಕೆ ವಿತರಣೆ ಸಾಧ್ಯವಾಗಿದೆ ಎಂದು ಶಾಸಕರು ತಿಳಿಸಿದರು.