Advertisement

2 ವರ್ಷದ ಮಗು ಸೇರಿ 4 ಮಕ್ಕಳಿಗೆ ಸೋಂಕು: ರಾಜ್ಯದಲ್ಲಿ 232ಕ್ಕೇರಿದ ಸೋಂಕಿತರ ಸಂಖ್ಯೆ

09:22 AM Apr 13, 2020 | keerthan |

ಬೆಂಗಳೂರು: ಕಲಬುರಗಿಯ ಎರಡು ವರ್ಷದ ಮಗು ಸೇರಿದಂತೆ ಮತ್ತೆ ಆರು ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 232 ಕ್ಕೇರಿದೆ.

Advertisement

ಇಂದು ರಾಜ್ಯದಲ್ಲಿ ಒಟ್ಟು 17 ಜನರಿಗೆ ಸೋಂಕು ದೃಢವಾಗಿದೆ. ಕಲಬುರಗಿಯ ಎರಡು ವರ್ಷದ ಮಗು, ವಿಜಯಪುರದ ಮೂವರು ಮಕ್ಕಳಿಗೆ ಸೋಂಕು ಖಚಿತವಾಗಿದೆ.

ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ಐದು ಸೋಂಕಿತರು ವಿಜಯಪುರದಿಂದ ವರದಿಯಾಗಿದೆ. ಇವರೆಲ್ಲರ ಸಂಪರ್ಕದ ಬಗ್ಗೆ ಇನ್ನೂ ಮಾಹಿತಿ ಕಲೆಹಾಕಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 232 ಪ್ರಕರಣಗಳು ದೃಢವಾಗಿದ್ದು, ಅದರೆಲ್ಲಿ ಆರು ಜನರು ಮೃತಪಟ್ಟಿದ್ದಾರೆ. 54 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next