ಕುಷ್ಟಗಿ : ಕುಷ್ಟಗಿ ಕೋವಿಡ್ ಕೇರ್ ಸೆಂಟರ್ ನಿಂದ ಕೋವಿಡ್ ಪಾಸಿಟಿವ್ ರೋಗಿಗಳು ಹೊರಗೆ ಸುತ್ತಾಡುತ್ತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕುಷ್ಟಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ 28 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕೆಲ ರೋಗಿಗಳು ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದು ಆತಂಕಕ್ಕೆ ಕಾರಣವಾಗಿದ್ದು, ಸುರಕ್ಷತೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದ ಸ್ಥಿತಿ ಇದಾಗಿದೆ.
ಇದನ್ನೂ ಓದಿ:ಡಿಸಿಎಂ ನೇತೃತ್ವದಲ್ಲಿ ಆಪರೇಷನ್ ಆಕ್ಸಿಜನ್;ತಪ್ಪಿದ ಭಾರೀ ಅನಾಹುತ,ಉಳಿಯಿತು 200 ಸೋಂಕಿತರ ಜೀವ
ಆಸ್ಪತ್ರೆಯ ಊಟ ರುಚಿಸದ ಹಿನ್ನೆಲೆಯಲ್ಲಿ ಮನೆಯಿಂದ ಬಿಸಿ ನೀರು, ತಿಂಡಿ, ಹಣ್ಣು ತರಿಸಿಕೊಳ್ಳುತ್ತಿರುವುದು ನಡೆಯುತ್ತಿದ್ದು, ಸ್ಥಳೀಯರು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ.
ಕೆಲ ರೋಗಿಗಳು ಹೊರಗೆ ಬಂದು ಸಾರ್ವಜನಿಕ ನಳದಲ್ಲಿ ಉಗುಳುವುದು ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ಅಬ್ದುಲ್ ನಯೀಮ್ ಆರೋಪಿಸಿದ್ದಾರೆ.