ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ನಲ್ಲಿ ಕೋವಿಡ್ ಪಾಸಿಟಿವ್ ನಿಂದ ಬಳಲುತ್ತಿದ್ದ ವೃದ್ಧನೋರ್ವ ಚಿಕಿತ್ಸಾ ಕೊಠಡಿಯ ಶೌಚಾಲಯದಲ್ಲಿಯೇ ರವಿವಾರ ತಡರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುಮಾರು 78 ವಯಸ್ಸಿನ ವೃದ್ಧ ನಗರದ ರಣದಮ್ಮ ಕಾಲೋನಿಯ ನಿವಾಸಿ ಎಂದು ಹೇಳಲಾಗಿದ್ದು, ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಗೊತ್ತಾಗಿದೆ.
ಇದನ್ನೂ ಓದಿ:ಕಾಂಕ್ರೀಟ್ ಕಳಚಿತು,ಕಾರು ಬಾವಿಗೆ ಬಿತ್ತು:ಅವೈಜ್ಞಾನಿಕ ಪಾರ್ಕಿಂಗ್ ಜಾಗ ನಿರ್ಮಾಣದಿಂದ ಅವಾಂತರ
ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಈ ಸಮಯದಲ್ಲಿ ಮಾನಸಿಕವಾಗಿ ನೊಂದು ಭಯದಿಂದ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಾರೀ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 70,421 ಕೋವಿಡ್ ಪ್ರಕರಣ ಪತ್ತೆ, 3921 ಸಾವು