ಹುಳಿಯಾರು: ಮಹಾಮಾರಿ ಕೊರೊನಾ ವೈರಸ್ ಭೀತಿಈಗ ಸಂತೆ ವ್ಯಾಪಾರಸ್ಥರಿಗೂ ತಟ್ಟಿದ್ದು, ವೈರಸ್ ಹರಡುವಭೀತಿಯಿಂದ ಹುಳಿಯಾರಿನ ಪೇಟೆಬೀದಿಯಲ್ಲಿನಡೆಯುತ್ತದ್ದ ಸಂತೆ ಸ್ಥಳವನ್ನು ಇಲ್ಲಿನ ಎಂಪಿಎಸ್ ಶಾಲಾಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಹಾಲಿ ಸಂತೆ ನಡೆಯುತ್ತಿದ್ದ ಪೇಟೆ ಬೀದಿಯ ಸ್ಥಳಕಿರಿದಾಗಿದ್ದು, ಸಾಮಾಜಿಕ ಅಂತಕ ಕಾಯ್ದುಕೊಂಡುವ್ಯಾಪಾರ ವಹಿವಾಟು ನಡೆಸುವುದು ಅಸಾಧ್ಯದ ಮಾತಾಗಿತ್ತು. ಅಲ್ಲದೆ, ಹುಳಿಯಾರು ಸಂತೆಗೆ ಅಕ್ಕಪಕ್ಕದ ಸಾವಿರಾರುಜನರು ಬರುವುದರಿಂದ ಸಂತೆ ಮೈದಾನ ಕಿಷ್ಕಿಂದೆಯಾಗಿಒಬ್ಬರಿಗೊಬ್ಬರು ತಗುಲಿಸಿಕೊಂಡು ಓಡಾಡುವುದು,ವ್ಯಾಪಾರ ಮಾಡುವುದು ಸಾಮಾನ್ಯವಾಗಿತ್ತು.
ಹಾಗಾಗಿಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನುತಡೆಯುವ ನಿಟ್ಟಿನಲ್ಲಿ ವಿಶಾಲವಾಗಿರುವ ಎಂಪಿಎಸ್ ಶಾಲಾಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.ಮುನ್ಸೂಚನೆ ಇಲ್ಲದೆ ಏಕಾಏಕಿ ಬುಧವಾರ ರಾತ್ರಿ ಸಂತೆಸ್ಥಳಾಂತರದ ತಿರ್ಮಾನ ತೆಗೆದುಕೊಂಡು ಗುರುವಾರ ಬೆಳಗ್ಗೆಸ್ಥಳಾಂತರಿಸಲು ಮುಂದಾದಾಗ ಕೆಲ ಗೊಂದಲ ಸೃಷ್ಟಿಯಾಯಿತು. ಸ್ಥಳಾಂತರದ ವಿಷಯ ತಿಳಿಯದ ಅನೇಕರುಹಾಲಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಅಂಗಡಿ ಜೋಡಿಸಿಕೊಂಡು ನಂತರ ವಿಷಯ ತಿಳಿದು ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಲ್ಲದೆ ಕೊರೊನಾಭೀತಿಯ ಹಿನ್ನೆಲೆಯಲ್ಲಿ ಅನೇಕ ರೈತರು, ವ್ಯಾಪಾರಿಗಳುಸಂತೆಗೆ ಬಾರದಿದ್ದರಿಂದ ಸಂತೆಯ ಕಳೆಗುಂದಿತ್ತು.ವಾರದ ಸಂತೆಯಲ್ಲದೆ ಹುಳಿಯಾರಿನ ನಾಡಕಚೇರಿಬಳಿ ನಡೆಯುತ್ತಿದ್ದ ಡೈಲಿ ಮಾರುಕಟ್ಟೆಯೂ ಸಹಎಂಪಿಎಸ್ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.
ಎಂಪಿಎಸ್‌ಶಾಲಾ ಮುಂಭಾಗದ ನಾಡಕಚೇರಿ ಮೈದಾನದಲ್ಲಿದ್ದವರುವಿಷಯ ತಿಳಿದು ಹೊಸ ಸ್ಥಳಕ್ಕೆ ಮೊದಲು ಆಗಮಿಸಿಮುಖ್ಯ ಹಾಗೂ ಮೊದಲ ಸ್ಥಳವನ್ನು ಆಯ್ಕೆಮಾಡಿಕೊಂಡಿದ್ದರು. ಹಾಗಾಗಿ ವಾರದ ಸಂತೆಯವರುತೀರಾ ಹಿಂದಕ್ಕೆ ಹೋಗಿ ಅಂಗಡಿಗಳನ್ನು ಇಟ್ಟುಕೊಳ್ಳುವುದುಅನಿವಾರ್ಯವಾಗಿತ್ತು.
ಮುಖ್ಯಶಿಕ್ಷಕಿ ಅಂಬಿಕಾ ಆಪೇಕ್ಷ: ಶಾಲೆಯ ಬಾಗಿಲಬಳಿಯೇ ಅಂಗಡಿಗಳನ್ನು ಇಟ್ಟುಕೊಂಡಿರುವುದಕ್ಕೆಮುಖ್ಯಶಿಕ್ಷಕಿ ಅಂಬಿಕಾ ಆಕ್ಷೇಪ ವ್ಯಕ್ತಪಡಿಸಿದರು.ಏ.30ರವರೆಗೂ ಶಾಲೆ ತೆರೆದಿದ್ದು, ಶಿಕ್ಷಕರು ನಿತ್ಯಬಂದೋಗುತ್ತಾರೆ. ಅಲ್ಲದೆ ಮಕ್ಕಳು ಮತ್ತು ಪೋಷಕರುರೇಷನ್ ಪಡೆಯಲು ಬರುತ್ತಾರೆ. ಹಾಗಾಗಿ ಬಾಗಿಲಬಳಿಯ ಅಂಗಡಿಗಳಿಂದ ತೊಂದರೆಯಾಗುತ್ತಿದ್ದು,ಇಲ್ಲಿಂದ ತೆರವು ಮಾಡಿಸಿ ಕಾಂಪೌಂಡ್ ಪಕ್ಕದಲ್ಲಿಇಟ್ಟುಕೊಳ್ಳುವಂತೆ ಕೇಳಿಕೊಂಡರು. ಪಪಂ ಎಂಜಿನಿಯರ್‌ಮಂಜುನಾಥ್ ನಾಳೆಯಿಂದ ಶಾಲೆಯ ಬಾಗಿಲ ಬಳಿಇಡದಂತೆ ವ್ಯಾಪಾರಸ್ಥರಿಗೆ ಸೂಚಿಸಿದರು.