ಮೈಸೂರು: ಚೆಲುವಾಂಬ ಆಸ್ಪತ್ರೆ ಮಕ್ಕಳಿಗೆಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಸುವಲ್ಲಿ ವೈದ್ಯರುಯಶಸ್ವಿಯಾಗಿದ್ದು, ಲಸಿಕೆ ಪಡೆದ 30 ಮಕ್ಕಳು ಆರೋಗ್ಯದಿಂದ್ದಾರೆ.
ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆಪರಿಣಾಮ ಬರಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಭಾರತ್ ಬಯೋಟೆಕ್ ಮಕ್ಕಳ ಮೇಲೆಪ್ರಯೋಗ ನಡೆಸಲು ದೇಶದ 10 ಮಕ್ಕಳ ಆಸ್ಪತ್ರೆಗಳಆಯ್ಕೆ ಮಾಡಿದ್ದು, ಈ ಪೈಕಿ ಮೈಸೂರಿನ ಚೆಲು ವಾಂಬಆಸ್ಪತ್ರೆಯನ್ನು ಆಯ್ಕೆ ಮಾಡಿತ್ತು. ಹಲವು ಸಿದ್ಧತೆಮತ್ತು ಸಾಕಷ್ಟು ಪೂರ್ವ ತಯಾರಿ ನಡೆಸಿದ ಚೆಲುವಾಂಬ ಆಸ್ಪತ್ರೆ ವೈದ್ಯರು ಯಾವುದೇ ಲೋಪವಾಗದಂತೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಯಶಸ್ವಿಯಾಗಿದ್ದಾರೆ.
ಚೆಲುವಾಂಬ ಆಸ್ಪತ್ರೆ ಸಹಪ್ರಾಧ್ಯಾಪಕ ಡಾ.ಪ್ರಶಾಂತ್, ಡಾ.ಪ್ರದೀಪ್, ಕ್ಲಿನಿಕಲ್‌ರಿಸರ್ಚ್ ಸಹಾಯಕಿಯರಾದ ಪೂಜಾ, ರೀನಾ,ನರ್ಸ್ ಸಾಕಮ್ಮ ತಂಡದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
175 ಮಕ್ಕಳ ಆಯ್ಕೆ: ಈ ಪ್ರಯೋಗಕ್ಕೆ ಮೊದಲಹಂತವಾಗಿ 12ರಿಂದ 18 ವರ್ಷದ 175 ಮಕ್ಕಳನ್ನುಆಯ್ಕೆ ಮಾಡಿಕೊಳ್ಳಲಾಗಿತ್ತು. ಇವರಲ್ಲಿ 53 ಮಕ್ಕಳನ್ನುಅಂತಿಮಗೊಳಿಸಿ, 30 ಮಕ್ಕಳಿಗೆ ಲಸಿಕೆ ನೀಡಲಾಗಿದೆ.ಲಸಿಕೆ ಪಡೆದ 30 ಮಕ್ಕಳಲ್ಲಿ ಪೈಕಿ 25 ಮೈಸೂರುಮತ್ತು 5 ಮಕ್ಕಳು ಬೆಂಗಳೂರಿ ನವರಾಗಿದ್ದಾರೆ.
ಲಸಿಕೆ ಪ್ರಯೋಗಕ್ಕೆ ಆಯ್ಕೆಯಾದ ಮಕ್ಕಳಪೋಷಕರೊಂದಿಗೆ ಆಡಿಯೋ ಕೌನ್ಸಿಲಿಂಗ್ ನಡೆಸಿಒಪ್ಪಿಗೆ ಪಡೆದುಕೊಳ್ಳಲಾಯಿತು. ಲಸಿಕೆ ನೀಡುವಮುನ್ನ ಆರ್‌ಟಿಪಿಸಿಆರ್ ಪರೀಕ್ಷೆ, ಬ್ಲಿಡ್ ಆಂಟಿಜನ್‌ಟೆಸ್ಟ್ ಎರಡಲ್ಲೂ ವರದಿ ಬಂದ ಮಕ್ಕಳನ್ನು ಆಯ್ಕೆಮಾಡಲಾಗಿದೆ.ಲಸಿಕೆ ನೀಡಿದ ಬಳಿಕ 2 ಗಂಟೆ ಮಕ್ಕಳ ಮೇಲೆ ನಿಗಾವಹಿಸಲಾಯಿತು. ಮನೆಗೆ ಕಳುಹಿಸಿದ ನಂತರವೂ ನಿತ್ಯ ದೂರವಾಣಿ ಮೂಲಕ ಮಕ್ಕಳ ಆರೋಗ್ಯದ ಕಾಳಜಿ ಮಾಡಲಾಯಿತು. ಲಸಿಕೆ ಪಡೆದವರಲ್ಲಿಐವರು ಮಕ್ಕಳಿಗೆ ಕೈ ನೋವು ಬಂದಿತ್ತು. ಒಂದು ಮಗುವಿಗೆ ಜ್ವರ ಬಂದಿತ್ತು. ಉಳಿದಂತೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತೆ 28 ದಿನಕ್ಕೆ ಮತ್ತೂಂದು ಲಸಿಕೆ ಪ್ರಯೋಗನಡೆಯಲಿದ್ದು, ಮಕ್ಕಳ ರೋಗ ನಿರೋಧಕ ಶಕ್ತಿಪರೀಕ್ಷಿಸಲು 56ನೇ ದಿನಕ್ಕೆ ಬ್ಲಿಡ್ ಆಂಟಿಜನ್ ಟೆಸ್ಟ್‌ಮಾಡಲಾಗುತ್ತದೆ. 4 ತಿಂಗಳಿಗೆ ಮತ್ತೆ, 7 ತಿಂಗಳಿಗೆಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ಮಾಹಿತಿನೀಡಿದ್ದಾರೆ