Advertisement
ಲಾಕ್‌ಡೌನ್ ಸಂದರ್ಭದಲ್ಲಿ ಬಿಟಿಎಂ ಲೇಟ್ ವಿಧಾನ ಕ್ಷೇತ್ರದಪ್ರತಿ ವಾರ್ಡ್‌ಗೂ ಭೇಟಿ ನೀಡಿ ಜನರ ಸುಖ ಕಷ್ಟಗಳನ್ನುಆಲಿಸುತ್ತಿರುವ ಅವರು ಕೊರೊನಾ ನಿಯಂತ್ರಣ ಕುರಿತು ಜಾಗೃತಿಮೂಡಿಸಿ ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಹಾಗೂದುರ್ಬಲ ವರ್ಗದವರಿಗೆ ಆಹಾರದ ಪೊಟ್ಟಣ, ಬಡಕುಟುಂಬಗಳಿಗೆ ಆಹಾರ ಧಾನ್ಯಗಳು ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.
Related Articles
Advertisement
ಆರೋಗ್ಯ ಸೇವೆಗಾಗಿ ಇಂದಿರಾ ಕ್ಲಿನಿಕ್: ಕೋವಿಡ್‌ಸೋಂಕಿತರ ಸಂಖ್ಯೆ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿವೈದ್ಯಕೀಯ ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳುಕಂಡು ಬಂದವು.ಹಾಗೆಯೇ ರೋಗಿಗಳು ಆಸ್ಪತ್ರೆ ಗಳಿಗೆತೆರಳಲು ಆಂಬುಲೆನ್ಸ್ ಸಮಸ್ಯೆ ಕೂಡ ಎದುರಾಯಿತು.ಕೋವಿಡ್ ಸೋಂಕಿತರು ದಿನವಿಡೀ ಆಂಬುಲೆನ್ಸ್‌ಗಾಗಿಕಾಯ ಬೇಕಾ ದಂತಹ ಪರಿಸ್ಥಿತಿ ಕೂಡ ಉಂಟಾಗಿತ್ತು. ಆಗತಮ್ಮದೇ ವೈಯಕ್ತಿಕ ವೆಚ್ಚದಲ್ಲಿ ಆಂಬ್ಯುಲೆನ್ಸ್ ಸೇವೆಒದಗಿಸಿದರು.22 ಲಕ್ಷ ರೂ. ವೆಚ್ಚದಲ್ಲಿ’ಇಂದಿರಾ ಸಂಚಾರಿಚಿಕಿತ್ಸಾಲಯ’: ಸಾರ್ವಜನಿಕರಿಗೆ ಉಚಿತಆರೋಗ್ಯ ತಪಾಸಣೆಮತ್ತು ಔಷಧಿ ವಿತರಣೆಸಲುವಾಗಿ ‘ಇಂದಿರಾಸಂಚಾರಿ ಚಿಕಿತ್ಸಾಲಯ’ವನ್ನು ಪ್ರಾರಂಭಿಸಲಾಗಿದೆ. ಈಚಿಕಿತ್ಸಾಲಯದಲ್ಲಿ ಒಬ್ಬರುವೈದ್ಯರು, ಶುಶ್ರೂಷಕರನ್ನುನೇಮಿಸಲಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿವೈದ್ಯಕೀಯ ಉಪಕರಣಗಳನ್ನುಅಳವಡಿಸಲಾಗಿದೆ. ಇಸಿಜಿ, ಬಿಪಿ, ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿಮಾಡಲಾಗುತ್ತಿದೆ.
ಜತೆಗೆ ಒಂದು ವಾರಕ್ಕೆಆಗುವಷ್ಟು ಔಷಧವನ್ನು ರೋಗಿಗಳಿಗೆನೀಡಲಾಗುತ್ತಿದೆ.ಬಿಟಿಎಂ ಲೇಔಟ್ ಕ್ಷೇತ್ರದ ಪ್ರತಿಯೊಂದುಬಡಾವಣೆಯಲ್ಲೂ ಇಂದಿರಾ ಸಂಚಾರಿಚಿಕಿತ್ಸಾಲಯದ ಮೂಲಕ ಆರೋಗ್ಯ ತಪಾಸಣಾಶಿಬಿರವನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆಮತ್ತು ಸಂಜೆ ಮೂರು ಗಂಟೆಗಳ ಕಾಲ ಒಂದೊಂದುಪ್ರದೇಶದಲ್ಲಿ ಚಿಕಿತ್ಸಾಲಯ ನಿಲ್ಲಲಿದೆ. ನಿತ್ಯ ಸುಮಾರು250 ಮಂದಿ ಚಿಕಿತ್ಸಾಲಯದಲ್ಲಿಆರೋಗ್ಯ ತಪಾಸಣೆ ಮಾಡಿಸಿಕೊಂಡುಔಷಧ ಪಡೆದುಕೊಳ್ಳುತ್ತಿದ್ದಾರೆ.ರಾಮಲಿಂಗರೆಡ್ಡಿ ಅವರುವೈಯಕ್ತಿಕವಾಗಿ 22 ಲಕ್ಷ ರೂ. ವೆಚ್ಚದಲ್ಲಿಇಂದಿರಾ ಸಂಚಾರಿ ಚಿಕಿತ್ಸಾಲಯಕ್ಕೆಚಾಲನೆ ನೀಡಿದ್ದಾರೆ.
“ಆರ್‌ಎಲ್‌ಆರ್ ಬಾಂಧವ’ತಂಡದಿಂದ ಉಚಿತ ಔಷಧ: ಬಿಟಿಎಂಬಡಾವಣೆ ಕ್ಷೇತ್ರದಲ್ಲಿ ನಾಗರಿಕರಿಗೆಆರೋಗ್ಯ ಸೇವೆಯನ್ನು ಒದಗಿಸಲುಶಾಸಕ ರಾಮಲಿಂಗಾ ರೆಡ್ಡಿ ವಿಶೇಷ ಒತ್ತುನೀಡಿದ್ದಾರೆ. ಸರ್ಕಾರ, ಬಿಬಿಎಂಪಿಯುಸೋಂಕಿತರಿಗೆ ಟೆಲಿ ಕನ್ಸಲ್ಟೆನ್ಸಿ ಸೇವೆಆರಂಭಿಸುವ ಮೊದಲೇ ತಮ್ಮಕ್ಷೇತ್ರದಲ್ಲಿ ಆನ್‌ಲೈನ್ ಮೂಲಕ ಉಚಿತವೈದ್ಯಕೀಯ ಸಮಾಲೋಚನೆಗೆ ವ್ಯವಸ್ಥೆಮಾಡಿದ್ದಾರೆ. ಇದಕ್ಕಾಗಿ 15 ಮಂದಿವೈದ್ಯರ ತಂಡವನ್ನೇಸಜ್ಜುಗೊಳಿಸಲಾಗಿದೆ. ಮನೆಯಲ್ಲಿಯೇಪ್ರತ್ಯೇಕ ಆರೈಕೆಗೆ ಒಳಗಾಗಿರುವಕೊರೊನಾ ಸೋಂಕಿತರ ಮನೆಬಾಗಿಲಿಗೆ ಅಗತ್ಯವಿರುವ ಔಷಧವನ್ನು”ಆರ್‌ಎಲ…ಆರ್ ಬಾಂಧವ’ ತಂಡವುಉಚಿತವಾಗಿ ತಲುಪಿಸುತ್ತಿದೆ.ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿಆಡುಗೋಡಿಯ ಬಾಷ್ ಕ್ರೀಡಾಸಂಕೀರ್ಣದಲ್ಲಿ 75 ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ200 ಹಾಸಿಗೆ ಸಾಮರ್ಥ್ಯದ ಕೋವಿಡ್‌ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.ಪ್ರತಿನಿತ್ಯ ಹೋಂ ಐಸೋಲೇಷನ್‌ನಲ್ಲಿರುವ 25ರಿಂದ 30 ಸೋಂಕಿತರಿಗೆ ಅಗತ್ಯಔಷಧಿಯನ್ನು ನೀಡಲಾಗುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಉಚಿತಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.