Advertisement

ರಾಜ್ಯಕ್ಕೆ ಮಾದರಿ ಜಿಲ್ಲೆ ಮಾಡುವ ಗುರಿ: ಸಿಇಒ

05:49 PM Jun 07, 2021 | Team Udayavani |

ದೇವನಹಳ್ಳಿ: ಕೊರೊನಾವನ್ನು ಗ್ರಾಮಗಳಿಂದ ಮುಕ್ತಮಾಡಿ, ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಮಾಡುವುದೇ ನಮ್ಮ ಗುರಿಯಾಗಿದೆ. ಜಿಲ್ಲೆಯಲ್ಲಿ 365ಗ್ರಾಮಗಳಲ್ಲಿ ಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಜಿಪಂ ಸಿಇಒಎಂ.ಆರ್‌ ರವಿ ಕುಮಾರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯನ್ನು ಕೋವಿಡ್‌ ಮುಕ್ತ ಗ್ರಾಮಗಳನ್ನಾಗಿಮಾಡಬೇಕು ಎಂದು ಸಂಕಲ್ಪ ಮಾಡಿಸಂಘಟಿತರಾಗಿ ಕೆಲಸ ಮಾಡಲಾಗುತ್ತಿದೆ.ಇನ್ನೊಂದು ವಾರದೊಳ ಗಾಗಿ 700 ಗ್ರಾಮಗಳನ್ನುಕೊರೊನಾ ಮುಕ್ತ ಗ್ರಾಮ ಗಳನ್ನಾಗಿ ಮಾಡಲಾಗುವುದು.ಲಾಕ್‌ಡೌನ್‌ ಮುಗಿ ಯು ವೇಳೆಗೆ 1000 ಗ್ರಾಮಗಳಲ್ಲಿಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡುವುದೇನಮ್ಮ ಉದ್ದೇಶ ವಾಗಿದೆ. ಪಂಚಾಯಿತಿ ಅಧಿಕಾರಿ ಗಳೊಂದಿಗೆ ಅಂಗನವಾಡಿ, ಆಶಾ ಕಾರ್ಯ ಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡು ತ್ತಿರುವುದರಿಂದ ಗ್ರಾಮಗಳಲ್ಲಿಸೋಂಕು ಹೆಚ್ಚು ಹರಡದಂತೆ ನಿಗಾವಹಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್‌ ಸಮಿತಿರಚನೆ: ಜಿಲ್ಲೆಯ ಪ್ರತಿಯೊಂದು ಗ್ರಾಪಂವ್ಯಾಪ್ತಿಯ ಗ್ರಾಮ ಗಳಲ್ಲಿ ಟಾಸ್ಕ್ಫೋರ್ಸ್‌ಸಮಿತಿ ರಚನೆ ಮಾಡ ಲಾ ಗಿದೆ. ಸ್ಯಾನಿಟೈಸರ್‌ ಸಿಂಪಡಣೆಮಾಡುವುದು, ಚರಂಡಿಗಳಿಗೆ ಬ್ಲೀಚಿಂಗ್‌ ಪೌಡರ್‌ಹಾಕುವುದು. ಹಳ್ಳಿಯವರನ್ನು ಬಿಟ್ಟು ಹೊರಗಿನಿಂದಬರುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಮಾಡಿಸಬೇಕು. ಮೊಬೈಲ್‌ ಕ್ಲೀನಿಕ್‌ಗಳ ಮೂಲಕಹಳ್ಳಿಗಳಿಗೆ ಕಳುಹಿಸಿ, ಗ್ರಾಮಗಳಲ್ಲಿನ ರೋಗದ ಲಕ್ಷಣಇರುವವರಿಗೆ ಅಲ್ಲಿಯೇ ತಪಾಸಣೆ ಮಾಡಿ ಕೊರೊನಾದೃಢ ಪಟ್ಟರೆ ಸ್ಥಳದಲ್ಲಿಯೇ ಔಷಧ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 1072 ಗ್ರಾಮಗಳುಬರಲಿದ್ದು, ಅದರಲ್ಲಿ 365 ಹಳ್ಳಿಗಳಲ್ಲಿ ಕೊರೊನಾಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ.ದೊಡ್ಡಬಳ್ಳಾಪುರ ತಾಲೂಕಿನಲ್ಲಿ 98 ಗ್ರಾಮಗಳು ,ದೇವನಹಳ್ಳಿಯಲ್ಲಿ 40, ನೆಲಮಂಗಲ ತಾಲೂಕಿನಲ್ಲಿ171 ಹಾಗೂ ಹೊಸಕೋಟೆಯಲ್ಲಿ 56 ಗ್ರಾಮಗಳಲ್ಲಿಕೊರೊನಾ ಮುಕ್ತ ಗ್ರಾಮಗಳು ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next