ನೆಲಮಂಗಲ: ಕೊರೊನಾದಿಂದ ಜನ ಸಾಮಾನ್ಯರುಸಂಕಷ್ಟು ಸಿಲಿಕಿದ್ದಾರೆ, ಇವರಿಗೆ ಕಾಂಗ್ರೆಸ್ ಮುಖಂಡವೆಂಕಟೇಶ್ ಬಾಬು ಗೆಳೆಯರ ಬಳಗ ದಿಂದ ಸಹಕಾರನೀಡುತ್ತಿರುವುದು ಸ್ವಾಗತಾರ್ಹ ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಕಾಂಗ್ರೆಸ್‌ಕಾರ್ಯಕರ್ತರು ಹಮ್ಮಿಕೊಂಡಿದ್ದ ದಿನಸಿ ಕಿಟ್‌ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸೋಂಕು ಇಳಿಮುಖವಾಗುತ್ತಿದೆ. ಆದರೆ, ಸರಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ. ಇದು ನಮ್ಮೆಲ್ಲರ ಕರ್ತವ್ಯ, ಲಾಕ್ ಡೌನ್‌ನಿಂದಶ್ರಮಿಕರು ಕೆಲಸವಿಲ್ಲದ ಕಾರ ಣಕ್ಕೆ ಮೂಲ ಸೌಲಭ್ಯ,ಆಹಾರದ ಸಮಸ್ಯೆಗಳನ್ನು ಎದುರಿ ಸುವಂತಹಪರಿಸ್ಥಿತಿ ನಿರ್ಮಾಣವಾಗಿರು ವುದು ಬೇಸರದ ಸಂಗತಿ. ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರುಸ್ವಯಂ ಪ್ರೇರಣೆಯಿಂದ ದಿನಸಿ ಮತ್ತಿ ತರರಪದಾರ್ಥಗಳನ್ನು ವಿತರಣೆ ಮಾಡುತ್ತಿರು ವುದುಜನರಿಗೆ ಅನುಕೂಲವಾಗಿದೆ ಎಂದರು.
ಸಂಕಷ್ಟಕ್ಕೆ ಸ್ಪಂದನೆ ನಮ್ಮ ಕರ್ತವ್ಯ: ಕಾಂಗ್ರೆಸ್‌ಮುಖಂಡ ವೆಂಕಟೇಶ್‌ಬಾಬು ಮಾತನಾಡಿ,ಕೋವಿಡ್‌ನಿಂದಾಗಿ ಜನ ಸಾಮಾನ್ಯರುಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವುದು ಸಮಾಜಸೇವಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಸ್ವಯಂ ಪ್ರೇರಣೆಯಿಂದ ಜನಸಾಮಾನ್ಯರಿಗೆಸಹಕರಿಸುವಲ್ಲಿ ಮುಂದಾಗಿದ್ದೇವೆ ಎಂದರು.
ಆಹಾರ, ದಿನಸಿ ವಿತರಣೆ: ಪಟ್ಟಣದ ಸಾರ್ವಜನಿಕಆಸ್ಪತ್ರೆ ಹಾಗೂ ಟಿಬೆಟಿಯನ್ ಹಾಸ್ಟೇಲ್‌ನಲ್ಲಿರುವಕೋವಿಡ್ ಕೇರ್ ಸೆಂಟರ್‌ಗಳಿಗೆ ವೆಂಕಟೇಶ್‌ಬಾಬು ಗೆಳೆಯರ ಬಳಗದಿಂದ ಎಳನೀರು, ಹಣ್ಣು,ಮಧ್ಯಾಹ್ನದ ಊಟಕ್ಕೆ ಬಿರಿಯಾನಿಯನ್ನು ಹಾಗೂಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಮುಗಿಬಿದ್ದ ಜನರು: ವೆಂಕಟೇಶ್‌ಬಾಬು ಗೆಳೆಯರಬಳಗದಿಂದ ದಿನಸಿ ಕಿಟ್‌ಗಳನ್ನು ವಿತರಿಸುತ್ತಾರೆಂಬವಿಚಾರ ತಿಳಿದ ಪಟ್ಟಣದ ಜನರು, ತಾಲೂಕುತಾಲೂಕು ಕಚೇರಿ ಮುಂದೆ ಜಮಾಯಿಸಿದ್ದು,ಎಂಎಲ್‌ಸಿ ರವಿ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆನೀಡುತ್ತಿದ್ದಂತೆ ಸ್ಥಳದಲ್ಲಿ ಜನರು ದಿನಸಿ ಕಿಟ್ ಮತ್ತುಊಟದ ಪ್ಯಾಕೇಟ್‌ಗಳನ್ನು ಪಡೆದುಕೊಳ್ಳಲುಮುಗಿಬಿದ್ದರು. ಜನರನ್ನು ದೈಹಿಕ ಅಂತರವನ್ನುಕಾಯ್ದುಕೊಳ್ಳುವಂತೆ ಸ್ವತಃ ವಿಧಾನಪರಿಷತ್ ಸದಸ್ಯಎಸ್.ರವಿ ಹೇಳಿದರೂ, ಕೆಳದ ಜನರು ಕೋವಿಡ್‌ನಿಯಮಗಳನ್ನು ಗಾಳಿಗೆ ತೂರಿದರು. ಬಿಎಂಟಿಸಿಮಾಜಿ ನಿರ್ದೇಶಕ ಮಿಲಿóà ಮೂರ್ತಿ, ಕಾಂಗ್ರೆಸ್‌ಮುಖಂಡರಾದ ರಾಯನ್ ನಗರ ರವಿಕುಮಾರ್,ದೀಪಕ್, ವಾಜರಳ್ಳಿ ನಾಗರಾಜ್, ರವಿಉಪಸ್ಥಿತರಿದ್ದರು.