Advertisement

ಉಳ್ಳವರು ಬಡವರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಲಿ

07:27 PM Jun 06, 2021 | Team Udayavani |

ಬಂಗಾರಪೇಟೆ: ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ನಷ್ಟ ಸಹಜ.ಅವುಗಳಿಗೆ ಸ್ಪಂದಿಸುವ ಮಾನವೀಯ ಗುಣ ಬೆಳೆಸಿಕೊಳ್ಳಬೇಕುಎಂದು ಉದ್ಯಮಿ ಡಿ.ಕಿಶೋರ್‌ ಪಟೇಲ್‌ ಹೇಳಿದರು.

Advertisement

ಪಟ್ಟಣದ ವಿವಿಧ ಸ್ಲಂಗಳಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆಸಿಲುಕಿರುವ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ವಿತರಿಸಿಮಾತನಾಡಿ, ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯದ ಕೆಲಸಮತ್ತೂಂದಿಲ್ಲ, ಸಹಭಾಳ್ವೆ ತತ್ವದ ಮೂಲಕ ನಾವೆಲ್ಲರೂ ನಮ್ಮಬದುಕಿನ ಕಷ್ಟಸುಖ ಹಂಚಿಕೊಳ್ಳಬೇಕು ಎಂದು ಹೇಳಿದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಒಂದು ಹೊತ್ತಿನಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಹಸಿವಿನಿಂದ ಯಾರೂಬಳಲಬಾರದೆಂಬ ಉದ್ದೇಶದಿಂದ ನಿರಂತರವಾಗಿ ಅನ್ನದಾಸೋಹ ಮಾಡಲಾಗಿದೆ ಎಂದರು.ಹಸಿದವರು ಹೊಟ್ಟೆ ತುಂಬಾ ಆಹಾರ ಸೇವಿಸಿಆಶೀರ್ವದಿಸುತ್ತಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಆ ಭಾಗ್ಯನನಗೆ ಲಬಿಸುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದುಅಭಿಪ್ರಾಯ ವ್ಯಕ್ತಪಡಿಸಿದರು.

ಸಬ್‌ ಇನ್ಸ್‌ಪೆಕ್ಟರ್‌ ಆರ್‌.ಜಗದೀಶರೆಡ್ಡಿ ಮಾತನಾಡಿ,ಅಂದಿನ ದುಡಿಮೆ ನಂಬಿ ಜೀವನ ನಡೆಸುವವರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಜೂ.14ರವರೆಗೂ ಬಡವರಿಗೆ ಉಚಿತ ಊಟಕ್ಕೆ ವ್ಯವಸ್ಥೆಮಾಡಿದ್ದರೂ ಹಾಹಾಕಾರ ನಿಂತಿಲ್ಲ. ಇಂತಹ ಸಮಯದಲ್ಲಿದಾನಿಗಳು ಮುಂದೆ ಬಂದು ಬಡವರ ಪರ ನಿಲ್ಲಬೇಕು ಎಂದುಹೇಳಿದರು. ಕಿಶೋರ್‌ ಮತ್ತು ಅವರ ಬಳಗ ನಿರಂತರವಾಗಿಅನ್ನ ದಾಸೋಹ ಮಾಡುತ್ತಿರುವುದನ್ನು ಶ್ಲಾ ಸಿದರು. ಲಯನ್‌ಆದಿಲ್‌ ಪಾಷ, ರಪೀಕ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next