Advertisement

ಸಿ.ಸಿ.ಕೇಂದ್ರಕ್ಕೆ ಔಷಧಿ ವ್ಯಾಪಾರಿಗಳ ಕೊಡುಗೆ

08:10 PM Jun 05, 2021 | Team Udayavani |

ಹಾಸನ: ನಗರದ ಹೊಸಲೈನ್‌ ಹಳೆ ಈದ್ಗಾಮೈದಾನದಲ್ಲಿರುವ ಚೈಲ್ಡ್‌ ಹೋಂ ಕಟ್ಟಡದಲ್ಲಿರುವಕೊರೊನಾ ಕೇರ್‌ ಸೆಂಟರ್‌ (ಸಿಸಿಸಿ)ಗೆಅಗತ್ಯವಿರುವ ಔಷಧೋಪಕರಣಗಳನ್ನು ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘವುಪ್ರತಿನಿತ್ಯ ಪೂರೈಸುತ್ತಿದೆ.

Advertisement

ನಗರದ ಹ್ಯುಮಾನಿಟೇರಿಯನ್‌ ಚಾರಿಟಬಲ್ಸ್‌ ಸರ್ವಿಸ್‌, ಶಮಾ ಟ್ರಸ್ಟ್‌ಹಾಗೂ ಬೆಂಗಳೂರಿನ ಎಚ್‌.ಬಿ.ಎಸ್‌ ಆಸ್ಪತ್ರೆಸಹಯೋಗದೊಂದಿಗೆ ನಡೆಯುತ್ತಿರುವ ಕೊರೊನಾಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವಸೋಂಕಿತರಿಗೆ ಔಷಧಿ, ಸ್ಯಾನಿಟೈಸರ್‌, ಮಾಸ್ಕ್,ಪಿಪಿಇ ಕಿಟ್‌ ಸೇರಿದಂತೆ ವೈದ್ಯೋಪಚಾರದ ಸಾಮಗ್ರಿ ಉಚಿತವಾಗಿ ಸಂಘವು ಕೊಡುಗೆನೀಡುತ್ತಿದೆ.

ಔಷಧೋಪಕರಣ ಹಸ್ತಾಂತರಿಸುವಸಂದರ್ಭದಲ್ಲಿ ಜಿಪಂ ಸಿಇಒ ಬಿ.ಎ.ಪರಮೇಶ್‌,ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದಅಧ್ಯಕ್ಷ ಕೆ.ಎಂ.ಸಣ್ಣ ಮಂಜೇಗೌಡ, ಕಾರ್ಯದರ್ಶಿಗಿರೀ ಗೌಡ, ಜಂಟಿ ಕಾರ್ಯದರ್ಶಿ ಎಸ್‌.ಎಸ್‌.ಸಂತೋಷ್‌ ಜೈನ್‌, ರೆಡ್‌ಕ್ರಾಸ್‌ ಸಂಸ್ಥೆಯ ಛೇರ¾ನ್‌ಎಚ್‌. ಪಿ.ಮೋಹನ್‌, ಹಸಿರುಭೂಮಿ ಪ್ರತಿಷ್ಠಾನದಆರ್‌.ಪಿ. ವೆಂಕಟೇಶ್‌ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next