Advertisement

ಲಕ್ಷಣಗಳು ಕಂಡ ತಕ್ಷಣವೇ ಕೊರೊನಾ ಪರೀಕ್ಷೆ ಮಾಡಿಸಿ

06:09 PM Jun 02, 2021 | Team Udayavani |

ಬಂಗಾರಪೇಟೆ: ಜ್ವರ ಸೇರಿ ಕೊರೊನಾ ಸೋಂಕಿನ ಲಕ್ಷಣಗಳುಕಂಡು ಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿ ಎಂದು ಜ್ಯೋತೇನಹಳ್ಳಿ ಆಲಂಬಾಡಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ ಹೇಳಿದರು.

Advertisement

ಗ್ರಾಪಂ ವ್ಯಾಪ್ತಿಯ ಬನಹಳ್ಳಿ ಗ್ರಾಮದಲ್ಲಿ ನಡೆದ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಕೊರೊನಾ 2ನೇ ಅಲೆಯು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಲುಅಜಾಗರೂ ಕತೆಯೇ ಕಾರಣ. ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೂ ಏನೂ ಆಗಿಲ್ಲ ಎಂಬಂತೆ ಮೆಡಿಕಲ್‌ ಶಾಫ್ನಿಂದ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸೋಂಕು ಹೆಚ್ಚಾದ ಮೇಲೆ ಆಸ್ಪತ್ರೆಗಳ ಮೊರೆ ಹೋಗುವ ಕಾರಣ, ಗ್ರಾಮೀಣ ಭಾಗದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ.ಜ್ವರ, ಕೆಮ್ಮು ನೆಗಡಿ ಇತ್ಯಾದಿ ಕಾಣಿಸಿಕೊಂಡರೆ ಕೊರೊನಾಪರೀಕ್ಷೆಗೆ ಒಳಗಾಗಿ, ರೋಗ ಉಲ್ಬಣ ಆಗುವುದಕ್ಕೆ ಮುಂಚೆಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಗ್ರಾಪಂ ಉಪಾಧ್ಯಕ್ಷೆ ಚೌಡಮ್ಮ, ಪಿಡಿಒ ಗಂಗೋಜಿರಾವ್‌,ಸದಸ್ಯರಾದ ರಾಮಚಂದ್ರ, ಶೋಭಾ, ವಿಜಯಕುಮಾರ್‌,ಮುಖಂಡರಾದ ಮುನಿರಾಜು, ಎಂ.ರಮೇಶ್‌ ಇತರರುಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next