Advertisement
ಇದರಿಂ ದಲೇ ಜಿಲ್ಲಾಡಳಿತ ಗ್ರಾಮೀಣ ಜನರನ್ನುಕೊರೊನಾ ದಿಂದ ಕಾಪಾಡಲು ಗಮನ ಹರಿಸಿದೆ.ಗ್ರಾಮ ಪಡೆ, ಪಂಚಾಯ್ತಿ ಪಡೆಗಳ ಮೂಲಕ ವಿವಿಧಚಟುವಟಿಕೆಗಳನ್ನು ನಡೆಸುತ್ತಿದೆ.
Related Articles
Advertisement
ಗ್ರಾಪಂನಲ್ಲಿ ಸಹಾಯವಾಣಿ: ಸೋಂಕಿತರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸ್ಥಳೀಯವಾಗಿಯೇ ಕೋವಿಡ್‌ಕೇರ್ ಕೇಂದ್ರ ಆರಂಭಿಸಲಾಗುತ್ತಿದೆ. ಅಲ್ಲಿಯವರೆಗೂಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವಸೋಂಕಿತರಿಗೆ ಅಗತ್ಯ ಮಾಹಿತಿ ನೀಡಲು ಪ್ರತಿ ಗ್ರಾಮಪಂಚಾಯ್ತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.ಪ್ರತಿ ಪಂಚಾಯ್ತಿಯಲ್ಲಿಯೂ ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಪಂಚಾಯ್ತಿ ವ್ಯಾಪ್ತಿಯ ಎಲ್ಲಾಮನೆಗಳಿಗೂ ತಲುಪಿಸಲಾಗಿದೆ.
ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇರಲು ಒಪ್ಪದಸೋಂಕಿತರು ಇರುವ ಮನೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಲು ಬಿಲ್ ಕಲೆಕ್ಟರ್ ಅಥವಾ ಇತರೆಸಿಬ್ಬಂದಿ ನೇಮಕ ಮಾಡಲಾಗಿದೆ. ಕರೆಯ ಮೂಲಕಸೋಂಕಿತರಿಂದ ಬಂದಿರುವ ಮಾಹಿತಿಯನ್ನು ನಿಗದಿತಡೇರಿಯಲ್ಲಿ ಬರೆದಿಡುವ ವ್ಯವಸ್ಥೆ ಮಾಡಲಾಗಿದೆ.ಆನಂ ತರ ಅಗತ್ಯವಾಗಿ ಕರೆ ಮಾಡಿರುವ ಸೋಂಕಿತರಿಗೆಬೇಕಾಗಿರುವ ಮಾಹಿತಿ, ನೆರವು, ಔಷಧಿಗಳ ಸಹಾಯವನ್ನು ಕಾರ್ಯಪಡೆಯ ಮೂಲಕ ಕಲ್ಪಿಸಲಾಗು ತ್ತಿದೆ.ಇದರಿಂದ ಬಹಳಷ್ಟು ಮಂದಿ ಸೋಂಕಿತರಿಗೆಅನುಕೂಲವಾಗುತ್ತಿದೆ.ಕಾರ್ಯ ಪಡೆಯ ಕರ್ತವ್ಯಗಳು: ಗ್ರಾಪಂ ಪಡೆ ಮತ್ತುಪಂಚಾಯ್ತಿ ಕಾರ್ಯಪಡೆಯ ಸದಸ್ಯರು ಮನೆ ಮನೆಗಳಿಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ನಿಗಾವಹಿಸಲುಸೂಚಿಸಲಾಗುತ್ತಿದೆ. ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದೆ.ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ.ಹೊರಗಿನಿಂದ ಯಾರೇ ಗ್ರಾಮಗಳಿಗೆ ಬರಬೇಕಾದರೂಅವರಿಗೆ ಕೋವಿಡ್ ಚಿಕಿತ್ಸೆ ಮಾಡಿಸಿ ನಿಗಾ ಇಡಲಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವಕಾರ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಚುರುಕಾಗಿನಡೆಸಲಾಗುತ್ತಿದೆ.
ಕೆ.ಎಸ್.ಗಣೇಶ್